ಅತ್ಯಂತ ಪ್ರಮುಖ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಗೂಗಲ್ ಪೇ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ಇನ್ನೂ ನೀವು ಗೂಗಲ್ ಪೇ ಬಳಕೆದಾರರಾಗಿದ್ದರೆ, ನೀವು ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.
ಗೂಗಲ್ ಪೇ ಮೂಲಕ ನೀವು ಒಮ್ಮೆಗೆ 8 ಲಕ್ಷ ರೂ.ವರೆಗಿನ ಸಾಲವನ್ನು ಪಡೆಯಬಹುದು. ಗೂಗಲ್ ಪೇ ನೇರವಾಗಿ ಸಾಲ ನೀಡುವುದಿಲ್ಲ. ಇದು ಡಿಎಂಐ ಫೈನಾನ್ಸ್ ಸಹಭಾಗಿತ್ವದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ. ಸಾಲ ಪಡೆಯಲು ಮಾಸಿಕ EMI ರೂ. 1000 ರಿಂದ ಆರಂಭವಾಗಲಿದೆ. ಆದರೆ ಇಲ್ಲಿ ನೀವು ಪಡೆಯುವ ಸಾಲದ ಮೊತ್ತ ಮತ್ತು ನೀವು ಆಯ್ಕೆ ಮಾಡಿಕೊಳ್ಳುವ ಅವಧಿಯ ಆಧಾರದ ಮೇಲೆ ಲೋನ್ EMI ಬದಲಾಗಲಿದೆ. ಈ ಸಾಲವು 100 ಪ್ರತಿಶತ ಡಿಜಿಟಲ್ ಆಗಿದ್ದು, ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನಿಮ್ಮ ಅರ್ಹತೆಯ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ರೂಪಾಯಿ 10 ಸಾವಿರದಿಂದ ಸಾಲ ಪಡೆಯಬಹುದಾಗಿದೆ. ಸಾಲದ ಅವಧಿಯು 6 ತಿಂಗಳಿಂದ 4 ವರ್ಷಗಳವರೆಗೆ ಇರಬಹುದು. ಮಾಸಿಕ EMI ರೂ. 1000 ರಿಂದ ಪ್ರಾರಂಭವಾಗಲಿದ್ದು, ಸಾಲದ ಬಡ್ಡಿ ದರವು 13.99 ಪ್ರತಿಶತದಿಂದ ಆರಂಭವಾಗುತ್ತದೆ. ನೀವು ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಲು ಮೊದಲು ನೀವು ಗೂಗಲ್ ಪೇ ಅಪ್ಲಿಕೇಶನ್‌ಗೆ ಹೋಗಬೇಕಾಗುತ್ತದೆ. ಇದಾದ ಬಳಿಕ, ನೀವು ಕೊಡುಗೆಗಳು ಮತ್ತು ಬಹುಮಾನಗಳು ಎಂಬ ಆಯ್ಕೆಯನ್ನು ಗಮನಿಸಿ, ಇದರಲ್ಲಿ ಮ್ಯಾನೇಜ್ ಯುವರ್ ಮನಿ ಆಯ್ಕೆ ಕಾಣಲಿದ್ದು, ಇದರಲ್ಲಿ ಲೋನ್ ಆಯ್ಕೆ ಕಾಣಿಸುತ್ತದೆ. ಯಾವುದೇ ಪೇಪರ್ ವರ್ಕ್ ಇಲ್ಲದೇ ನೀವು ಸುಲಭವಾಗಿ ರೂಪಾಯಿ 8 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ. ನೀವು ಈಗ ಅನ್ವಯಿಸು ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ. ಈಗ ನಿಮಗಾಗಿ ಹೊಸ ಪುಟ ತೆರೆದುಕೊಳ್ಳುತ್ತದೆ. ಇದು ನಿಮ್ಮ ಸಾಲದ ವಿವರಗಳನ್ನು ಒಳಗೊಂಡಿದೆ. ಗೂಗಲ್ ಪೇ ಮಧ್ಯವರ್ತಿಯ ಹಾಗೆ ಕಾರ್ಯ ನಿರ್ವಹಿಸುತ್ತದೆ. ಡಿಎಮ್ಐ ಫೈನಾನ್ಸ್ ನಿಮಗೆ ಸಾಲವನ್ನು ನೀಡುತ್ತದೆ. ಈಗ ಅನ್ವಯಿಸು ಕ್ಲಿಕ್ ಮಾಡಬೇಕು. ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನೀವು ಒದಗಿಸಬೇಕಾಗುತ್ತದೆ. ವಿಳಾಸ, ಕೆಲಸದ ವಿವರಗಳು ಮತ್ತು ಇತರ ವಿವರಗಳನ್ನು ನೀಡಬೇಕಾಗಿದ್ದು, ಈ ರೀತಿಯ ಎಲ್ಲಾ ವಿವರಗಳನ್ನು ಒದಗಿಸಿದ ಬಳಿಕ ನಿಮ್ಮ ಲೋನ್ ಅರ್ಹತೆ ತಿಳಿಯುತ್ತದೆ. ನೀವು ಸಾಲದ ಅರ್ಹತೆಯನ್ನು ಹೊಂದಿದ್ದರೆ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆಯಾಗಿದೆ.