ಕೊಪ್ಪಳ : ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನಯೆಲ್ಲಿ ಮೂವರು ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.ಹೌದು ಮೂವರು ಅನುಮಾನಾಸ್ಪದ ಶವಗಳು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗಿತ್ತು.ಆದರೆ ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನನ್ನನ್ನು ಬಿಟ್ಟು ಅಣ್ಣನನ್ನು ಮದುವೆಯಾಗಿದ್ದಕ್ಕೆ ತಮ್ಮನೊಬ್ಬ ಮೂವರನ್ನು ಭೀಕರವಾಗಿ ಕೊಲೆಗೈದಿದ್ದಾನೆ.
ಹೌದು ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನಯೆಲ್ಲಿ ನಿನ್ನೆ ಮೂವರು ಶವವಾಗಿ ಪತ್ತೆಯಾಗಿದ್ದರು. ಒಂದೇ ಮನೆಯಲ್ಲಿ ಮೂವರು ನಿಗೂಢವಾಗಿ ಸಾವನಪ್ಪಿದ ಪ್ರಕರಣ ಮೂವರದು ಆತ್ಮಹತ್ಯೆ ಅಲ್ಲ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಹೊಸ ಲಿಂಗಾಪುರ ಗ್ರಾಮದ ನಿವಾಸಿಗಳಾದ ಐವತ್ತು ವರ್ಷದ ರಾಜೇಶ್ವರಿ,ರಾಜಶ್ವರಿ ಪುತ್ರಿಯಾಗಿರುವ ಇಪ್ಪತ್ತೆಂಟು ವರ್ಷದ ವಸಂತಾ, ಮತ್ತು ವಸಂತಾಳ ಐದು ವರ್ಷದ ಮಗ ಸಾಯಿಧರ್ಮತೇಜ್, ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಪೊಲೀಸರು ತನಿಖೆ ಕೈಗೊಂಡಾಗ ಬೆಚ್ಚಿಬಿದ್ದಿದ್ದು, ತನ್ನನ್ನು ಬಿಟ್ಟು ಅಣ್ಣನನ್ನು (ಆರಿಫ್) ಮದುವೆಯಾಗಿದ್ದಕ್ಕೆ ಮೂವರನ್ನು ತಮ್ಮ (ಆಸೀಫ್) ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಬೆಚ್ಚಿಬಿದ್ದ ಪೊಲೀಸರು!
ಇನ್ನು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ತಿಳಿದ ತಕ್ಷಣ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಕೊಲೆಯಾದಂತಹ ವಸಂತ ಮೊದಲು ಆಂಧ್ರದ ಮೂಲದ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಕೌಟುಂಬಿಕ ಕಲಹದಿಂದ ಬೇರೆಯಾಗಿ, ಮೊದಲ ಪತಿಯನ್ನು ಬಿಟ್ಟು ಬಂದು, ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ ಮತ್ತು ಮಗನ ಜೊತೆ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಇನ್ನು ಹೊಸಲಿಂಗಾಪುರ ಗ್ರಾಮದ ಹೊರವಲಯಲ್ಲಿರುವ ಗೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಈ ವೇಳೆ ಅದೇ ಫ್ಯಾಕ್ಟರಿಯಲ್ಲಿ ಆರಿಫ್ ಎನ್ನುವ ವ್ಯಕ್ತಿಯ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ ಈ ವೇಳೆ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ.ಬಳಿಕ ಆರೀಫ್ ಮತ್ತು ವಸಂತಾ ಆರು ತಿಂಗಳ ಹಿಂದೆ ಮದುವೆಯಾಗಿದ್ದರಂತೆ. ಹಾಗಾಗಿ ವಸಂತ ಇದ್ದಂತಹ ಬಾಡಿಗೆ ಮನೆಗೆ ಆಗಾಗ ಆರೀಫ್ ಬಂದು ಹೋಗುತ್ತಿದ್ದ.
ಆರಿಫ್ ವಸಂತ ಮದುವೆಯಾದ ತಕ್ಷಣ ಆರಿಫ್ನ ಸಹೋದರ ಆಸಿಫ್ ಕೋಪಗೊಂಡಿದ್ದಾನೆ.ಯಾಕಂದ್ರೆ ಆರೀಫ್ನ ಮದುವೆಯಾಗೋ ಮೊದಲು ಆಸೀಫ್ ಮತ್ತು ವಸಂತಾ ಪ್ರೀತಿಸುತ್ತಿದ್ದರಂತೆ. ಇಬ್ಬರು ಕೂಡಾ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದ್ರೆ ಬದಲಾದ ಸಮಯದಲ್ಲಿ ವಸಂತಾ,ಆಸೀಫ್ ನನ್ನು ಬಿಟ್ಟು ಆತನ ಸಹೋದರ ಆರೀಫ್ನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆರೀಫ್ ಮತ್ತು ವಸಂತಾ ಮದುವೆಯಾದ ನಂತರ ಆಸೀಫ್ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು.
ಇದೇ ಸಿಟ್ಟಿನಲ್ಲಿ ಆಸೀಫ್, ಮೇ 27 ರಂದು ಸಂಜೆ ಐದರಿಂದ ಆರು ಗಂಟೆ ಸಮಯದಲ್ಲಿ ವಸಂತಾಳ ಮನೆಗೆ ಬಂದಿದ್ದ. ಮೊದಲು ರಾಜೇಶ್ವರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಸಾಯಿಧರ್ಮತೇಜ್ ನನ್ನು ಕೊಲೆ ಮಾಡಿದ್ದ. ಬಳಿಕ ಕೊನೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ವಸಂತಾಳನ್ನು ಕೂಡಾ ಕೊಲೆ ಮಾಡಿದ್ದ. ಸದ್ಯ ಮೂವರ ಸಾವಿನ ಬಗ್ಗೆ ತನಿಖೆ ನೆಡಸಿದ ಪೊಲೀಸರು ಆತ್ಮಹತ್ಯೆಯಲ್ಲ ಇದು ಕೊಲೆ ಎಂದು ತಿಳಿಸಿದ್ದಾರೆ. ಘಟನೆ ನಡೆದ 24 ಗಂಟೆಯ ಒಳಗೆ ಆರೋಪಿಯನ್ನು ಜೈಲಿಗೆ ಅಟ್ಟುವಲ್ಲಿ ಪೊಲೀಸರು ಸಕ್ಸಸ್ ಆಗಿದ್ದಾರೆ.