ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಕರನ ಪ್ರೀತಿಗೆ ಮರುಳಾಗಿ ಕೈ ಹಿಡಿದ ಗಂಡನನ್ನು ಯುಟ್ಯೂಬ್ ನೋಡಿ ಮರ್ಡರ್ ಮಾಡಿದ ಘೋರ ಘಟನೆ ಬೆಚ್ಚ ಬೀಳಿಸುವಂತೆ ಮಾಡಿದೆಯಾಗಿದೆ.
ಹರಿಯಾಣ ರಾಜ್ಯದ ಯಮುನಾನಗರ ಮೂಲದ ಮೀನಾಕ್ಷಿಗೆ ಪತಿ ನೀತು (30) ಜೊತೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಅದೇ ಮೀನಾಕ್ಷಿಗೆ ಇನ್ಸ್ಟಾಗ್ರಾಮ್ನಲ್ಲಿ ಸೋನಿಪತ್ ಮೂಲದ ಸಾಹಿಲ್ ಎಂಬಾತನ ಪರಿಚಯ ಆಗುತ್ತದೆ. ಪರಿಚಯ ಆದ ಬಳಿಕ ಇವರ ಮಧ್ಯೆ ಪ್ರೀತಿ ಬೆಳೆದು ‘ನಿನಗೆ ನಾನು, ನೀನು ನನಗೆ’ ಅಂತಾ ಪ್ರೇಮದ ಅಮಲಿನಲ್ಲಿ ತೇಲಾಡಲು ಶುರುಮಾಡಿದ್ದರು. ಎಂದೆಂದಿಗೂ ಬಿಟ್ಟಿರಲಾಗದ ಪ್ರೀತಿ ನಮ್ಮದು ಅಂದುಕೊಂಡ ಮೀನಾಕ್ಷಿ, ತನ್ನ ಪತಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದಳು. ಪ್ರೀತಿಗೆ ಮರುಳಾದ ಈಕೆ ಆತನ ಪ್ರಿಯಕರನ ಜೊತೆ ಸಂಸಾರ ನಡೆಸಲು ನಿರ್ಧಾರ ಮಾಡಲು ಶುರು ಮಾಡಿದ್ದಾಳೆ. ಮೀನಾಕ್ಷಿಯು ಪ್ರಿಯಕರನ ಪ್ರೀತಿ ಬಯಸಲು ತನ್ನ ಪತಿ ನೀತುವನ್ನು ಮುಗಿಸಿ ಬಿಡಲು ಯೋಚನೆ ಮಾಡುತ್ತಾಳೆ. ಪತಿಯನ್ನು ಸಾಯಿಸಿ ಬಿಟ್ಟರೆ ಮತ್ತೆ ಸಾಹಿಲ್ ಜೊತೆ ಚೆನ್ನಾಗಿ ಜೀವನ ನಡೆಸಬಹುದು ಎಂದು ಯೋಚಿಸಿದ ಆಕೆಗೆ ಸಾಯಿಸುವುದು ಹೇಗೆ ಎಂದು ಗೊತ್ತಿರಲಿಲ್ಲ. ಹಾಗಾಗಿ ಅವಳು ಯುಟ್ಯೂಬ್ ನೋಡಿ ತನ್ನ ಗಂಡನ ಮರ್ಡರ್ ಮಾಡಲು ನಿಶ್ಚಯ ಮಾಡುತ್ತಾಳೆ. ಯೂಟ್ಯೂಬ್ನಲ್ಲಿ ಹೇಗೆ ಸಾಯಿಸಬಹುದು, ನಂತರ ಪ್ರಕರಣವನ್ನು ಹೇಗೆ ಮುಚ್ಚಿ ಹಾಕಬಹುದು ಎಂದು ಹುಡುಕಾಡಿದ್ದಾಳೆ. ಕೊನೆಗೆ ಓವರ್ ಡೋಸ್ ಇಂಜೆಕ್ಷನ್ ನೀಡಿದರೆ ಮನುಷ್ಯರು ಸಾಯುತ್ತಾರೆ ಎಂದು ತಿಳಿದುಕೊಂಡಿದ್ದಾಳೆ. ಅಂತೆಯೇ ಪ್ರಿಯಕರನ ಜೊತೆ ಸೇರಿ ಹಾಗೂ ಆತನ ಸ್ನೇಹಿತ ಸೇರಿ ಮೀನಾಕ್ಷಿಯ ಪತಿಯನ್ನು ಮರ್ಡರ್ ಮಾಡುತ್ತಾರೆ. ಇದಾದ ಬಳಿಕ ಈ ಮೂವರು ಆರೋಪಿಗಳ ಎಸ್ಕೇಪ್ ಆಗಲು ನೋಡುತ್ತಾರೆ. ಆದರೆ ಜನವರಿ 4ರಂದು ನೀತು ಅವರ ಮೃತದೇಹ ಪತ್ತೆಯಾದ ಕಾರಣ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಮೀನಾಕ್ಷಿಯನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿಸಿರುವ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.