ಆಂಧ್ರಪ್ರದೇಶ : ಆ ಮನೆಯಲ್ಲಿ ಮದುವೆಯ ಕಳೆ ಎದ್ದು ಕಾಣುತ್ತಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಬಂದೇರಗಿದೆ.ಆ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಅಗ್ನಿ ದುರಂತ ಸಂಭವಿಸಿದ್ದು, 15 ಲಕ್ಷ ರೂಪಾಯಿ ಸೇರಿದಂತೆ ಚಿನ್ನಾಭರಣಗಳೆಲ್ಲವೂ ಸುಟ್ಟು ಭಸ್ಮವಾಗಿದ್ದು ಇದೀಗ ಕುಟುಂಬ ದಿಕ್ಕು ತೋಚದೆ ಕಂಗಾಲಾಗಿದೆ.
ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಈ ಸೇವೆ!
ಹೌದು ಈ ಘಟನೆ ನಡೆದಿದ್ದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಕಟಿಕೆ ಮೋಹನ್ ರಾವ್, ನಾಗೇಶ್ವರ್ ರಾವ್ ಅವರು ಕರ್ನೂಲ್ ಜಿಲ್ಲೆಯ ದೇವನಕೊಂಡ ಮಂಡಲದ ಕರಿವೇಮಲ್ ಗ್ರಾಮದ ನಿವಾಸಿಗಳು. ತಮ್ಮ ಸಹೋದರಿಗೆ ವಿವಾಹ ನಿಶ್ಚಯ ಮಾಡಿದರು. ಅದಕ್ಕಾಗಿ ಅಲ್ಲಿ ಇಲ್ಲಿ ಸಾಲಸೋಲ ಮಾಡಿ 15 ಲಕ್ಷ ರೂಪಾಯಿ ನಗದು, 10 ತೊಲೆ ಚಿನ್ನ, 20 ಪೌಂಡ್ ಬೆಳ್ಳಿಯನ್ನು ತಂದು ಮನೆಯಲ್ಲಿ ಮದುವೆ ಸಮಾರಂಭಕ್ಕಾಗಿ ಇಡಲಾಗಿತ್ತು.
ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಹೆಚ್ಡಿ ಕುಮಾರಸ್ವಾಮಿ:ಡಿಸಿಎಂ ಡಿಕೆ ವಾಗ್ದಾಳಿ
ಅಗ್ನಿ ದುರಂತ ಸಂಭವಿಸಿದ್ದು, ಸಂಭ್ರಮ ಮನೆಮಾಡಿದ್ದ ಆ ಮನೆಯಲ್ಲಿ ವಿಷಾದವಷ್ಟೇ ಉಳಿದಿದೆ. ಹೆಣ್ಣು ಮಗಳಿಗಾಗಿ ಮದುವೆ ಮಾಡಲು ಪಟ್ಟ ಶ್ರಮವೆಲ್ಲ ವ್ಯರ್ಥವಾಗಿದೆ. ಮದುವೆ ದಿನಾಂಕದ ಬಗ್ಗೆಯೂ ಸಂಬಂಧಿಕರಿಗೆ ಮಾಹಿತಿ ನೀಡಿ, ಆಹ್ವಾನಿಸಲಾಗಿತ್ತು. ಮದುವೆಯ ದಿನ ಹತ್ತಿರವಾಗುತ್ತಿದಂತೆ ಸಾಲಸೋಲ ಮಾಡಿ ನಗದು, ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಮನೆಯಲ್ಲಿ ಎತ್ತಿಟ್ಟಿದ್ದಾರೆ.
170 ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ ಕೇಂದ್ರ ಸರ್ಕಾರ!
ಆದರೆ ಅಗ್ನಿ ಅನಾಹುತ ಘಟಿಸಿ, ಆಭರಣ, ಹಣ ಎಲ್ಲಾ ಬೆಂಕಿಗೆ ಆಹುತಿಯಾಗಿದೆ. ಈ ಅಚಾನಕ್ಕಾದ ಪ್ರಮಾದವು ನಡೆಯಬೇಕಿದ್ದ ಮದುವೆಗೆ ವಿಘ್ನ ತಂದಿದೆ. ಮನೆಯಲ್ಲಿ ದುಃಖ ಮಡುಗಟ್ಟಿದೆ. ಇದ್ದಕ್ಕಿದ್ದಂತೆ ಆ ಮನೆ ಬೆಂಕಿ ಬಿದ್ದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ.