ಸುಭಾಷಿತ :

Sunday, January 26 , 2020 4:20 AM

ನಾನು ಜೀವಂತವಾಗಿದ್ದೇನೆ. ವದಂತಿಗಳನ್ನು ನಂಬಬೇಡಿ : ನಟ ದ್ವಾರಕೀಶ್


Tuesday, July 16th, 2019 1:55 pm

ಬೆಂಗಳೂರು : ನಟ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿದ ವದಂತಿಗಳಿಗೆ ಸ್ವತಃ ದ್ವಾರಕೀಶ್ ಅವರೇ ಸ್ಪಷ್ಟನೆ ನೀಡಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಕರ್ನಾಟಕದ ಕುಳ್ಳ ದ್ವಾರಕೀಶ್ ಇನ್ನಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದನ್ನು ನೋಡಿದವರು ಆತಂಕಕ್ಕೊಳಗಾಗಿದ್ದರು. ಆದರೆ, ಇದು ಕೇವಲ ವದಂತಿ, ನಾನು ಇನ್ನೂ ಬದುಕಿಯೇ ಇದ್ದೇನೆ ಎಂದು ದ್ವಾರಕೀಶ್ ಅವರೇ ಸ್ಪಷ್ಟಪಡಿಸಿದ್ದಾರೆ.

ವಿಡಿಯೋದಲ್ಲಿ ದ್ವಾರಕೀಶ್ ಅವರು, ನಮಸ್ಕಾರ, ನಿಮ್ಮ ದ್ವಾರಕೀಶ, ಕನ್ನಡದ ಕುಳ್ಳು ಆರೋಗ್ಯವಾಗಿದ್ದೇನೆ. ಹುಷಾರಾಗಿ ಇದ್ದೀನಿ. ಯಾವ ತರಹದ ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ. ಏನೇ ಅದರೂ ನಿಮಗೆ ಗೊತ್ತಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ ಚೆನ್ನಾಗಿದ್ದಾನೆ. ಚೆನ್ನಾಗಿದ್ದೀನಿ, ಚೆನ್ನಾಗಿ ಇರ್ತೀನಿ. ಎಲ್ಲಾ ಆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಎಂದಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions