ಇಳಕಲ್:4.19 ಲಕ್ಷ ಮೌಲ್ಯದ ಜಿಲೆಟಿನ್ ಸೇರಿದಂತೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ತೆರೆದ ವಾಹನವನ್ನು ಇಳಕಲ್ ಪಟ್ಟಣ ಪೊಲೀಸರು ವಶಪಡಿಸಿಕೊಂಡು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯ ಬಸವೇಶ್ವರ ವೃತ್ತದ ಬಳಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮುದ್ದೇಬಿಹಾಳ ತಾಲೂಕಿನ ಬಳಾವತ್ ಗ್ರಾಮದ ಸಚಿನಕುಮಾರ ಯಾಳವಾರ ಮತ್ತು ಬಸನಗೌಡ ಬಿರಾದಾರ್ ಬಂಧಿತರು.