ಮಂಗಳೂರು: ಹೆಬ್ಬಾವಿನ ಮರಿ ಎಂದು ವಿಷದ ಹಾವಿನ ಮರಿಯನ್ನ ಬರಿಗೈಯಲ್ಲಿ ಹಿಡಿದ ವ್ಯಕ್ತಿಯೊಬ್ಬರಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಮರವೂರು ಎಂಬಲ್ಲಿ ನಡೆದಿದೆ.
ಬಂಟ್ವಾಳ ನಿವಾಸಿ 58 ವರ್ಷದ ರಾಮಚಂದ್ರ ಪೂಜಾರಿ ಮೃತ ದುರ್ದೈವಿ. ಮೃತ ರಾಮಚಂದ್ರ ಪೂಜಾರಿ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಸೆ.4 ರ ಮಧ್ಯಾಹ್ನ ಮನೆಯ ಮೆಟ್ಟಿಲು ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ, ಈ ವೇಳೆ ಅವರು ಅದನ್ನು ಹಿಡಿದುಕೊಂಡು ಹೆಬ್ಬಾವಿನ ಮರಿ ಅಂಥ ಅಂದುಕೊಂಡಿದ್ದಾರೆ, ಅದರೆ ಅದು ಕಚ್ಚಿದ್ದರು ಕೂಡ ಅದಕ್ಕೆ ಕ್ಯಾರೆ ಎನ್ನದೆ ಸುಮ್ನಾಗಿದ್ದಾರೆ. ಈ ವೇಳೆ ಅವರು ಸಂಜೆ ವೇಳೆಗೆ ಅವರ ಆರೋಗ್ಯದಲ್ಲಿ ತೀವ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.