ಬೆಂಗಳೂರು: ದಸರಾ ಹಬ್ಬಕ್ಕೆ ಒಂದು ಕಡೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದರೆ, ಮತ್ತೊಂದು ಕಡೆ ಹೂವು, ಹಣ್ಣುಗಳ ಬೆಲೆ ಕೂಡ ಹೆಚ್ಚಳವಾಗುತ್ತಿದೆ.
ಮೊದಲೇ ಬೆಲೆ ಏರಿಕೆ ಬಿಸಿಯಿಂದ ಬೇಯುತ್ತಿರುವ ಜನತೆಗೆ ಈಗ ಹಬ್ಬದ ಸಮಯದಲ್ಲಿ ಹೂವು, ಹಣ್ಣುಗಳ ಬೆಲೆ ಹೆಚ್ಚಳವಾಗುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿರುವುದರಲ್ಲಿ ಅನುಮಾನವಿಲ್ಲ. ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಮಾರುಕಟ್ಟೆಗೆ ತೆರಳಿದರೆ ಬೆಲೆ ಏರಿಕೆಯ ಕಂಡು ಬೆರಾಗುತ್ತಿದ್ದಾರೆ. ಅನೇಕ ಮಂದಿ ಚೌಕಾಸಿ ಕೂಡ ಮಾಡುತ್ತಿದ್ದು, ವ್ಯಾಪಾರಿಗಳ ಮನ ಗೆಲ್ಲುವಲ್ಲಿ ಕೆಲವು ಮಂದಿ ಯಶಸ್ವಿಯಾದರೆ, ಮತ್ತೆ ಕೆಲವು ಮಂದಿ ಬಂದ ದಾರಿಗೆ ಸುಖವಿಲ್ಲ ಅನ್ನೋ ರೀತಿ ಕಾಸಿಗೆ ತಕ್ಕಂತೆ ಖರೀದಿ ಮಾಡುತ್ತಿದ್ದಾರೆ. ಅಂದ ಹಾಗೇ ಇಂದಿನ ದರ ಹೀಗಿದೆ: ಸೇವಂತಿ 300-400 ರೂ. ಕನಕಾಂಬರ 2000-2500 ರೂ.