ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನಿಂದ ಮುಜುಗರದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜ್ಯೂಸ್ ಮಾರಾಟಗಾರನ ಜ್ಯೂಸ್‌ನಲ್ಲಿ ಮೂತ್ರವನ್ನು ಬೆರೆಸಿ ಜನರಿಗೆ ಕುಡಿಸುತ್ತಿದ್ದನು ಎನ್ನಲಾಗಿದೆ. ಜನರ ದೂರಿನ ನಂತರ, ಆರೋಪಿ ಜ್ಯೂಸ್ ಮಾರಾಟಗಾರ ಮತ್ತು ಅವನ 15 ವರ್ಷದ ಮಗನನ್ನು ಬಂಧಿಸಲಾಗಿದೆ.
ಜ್ಯೂಸ್ ಮಾರಾಟಗಾರನನ್ನು ಶುಕ್ರವಾರ ಬಂಧಿಸಲಾಗಿದ್ದು, ಆತನ 15 ವರ್ಷದ ಮಗನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಈ ಪ್ರಕರಣವು ಗ್ರಾಹಕರಿಗೆ ಮೂತ್ರ ಬೆರೆಸಿದ ಹಣ್ಣಿನ ರಸವನ್ನು ಪೂರೈಸುವುದಕ್ಕೆ ಸಂಬಂಧಿಸಿದೆ. ಪೊಲೀಸರ ಪ್ರಕಾರ, ಜ್ಯೂಸ್ ಮಾರಾಟಗಾರ ಮಾನವ ಮೂತ್ರ ಬೆರೆಸಿದ ಹಣ್ಣಿನ ರಸವನ್ನು ಗ್ರಾಹಕರಿಗೆ ನೀಡುತ್ತಿದ್ದಾನೆ ಎಂದು ಸಾರ್ವಜನಿಕರಿಂದ ದೂರು ಬಂದ ನಂತರ ಬಂಧಿಸಲಾಗಿದೆ ಅಂತ ತಿಳಿಸಿದ್ದಾರೆ.
ಈ ಕೃತ್ಯದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ವರ್ಮಾ ಹೇಳಿದ್ದಾರೆ. ಅಂಗಡಿಯಲ್ಲಿ ಮೂತ್ರದ ಉಪಸ್ಥಿತಿಗೆ ಅಂಗಡಿಯವರು ಯಾವುದೇ ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ವರ್ಮಾ ಹೇಳಿದರು.
“ಸೆಪ್ಟೆಂಬರ್ 13 ರಂದು ಮಾಹಿತಿ ಪಡೆದ ನಂತರ, ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರು ಮತ್ತು ಅಂಗಡಿಯ ಕ್ಯಾನ್ನಿಂದ ಸುಮಾರು 1 ಲೀಟರ್ ಶಂಕಿತ ಮೂತ್ರವನ್ನು ಕಂಡುಕೊಂಡರು. ಪೊಲೀಸರು ಅಮೀರ್ ಖಾನ್ ಅವರನ್ನು ಬಂಧಿಸಿದ್ದಾರೆ. ಎಫ್ಐಆರ್ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ನಡೆಯುತ್ತಿದೆ ಎಂದು ವರ್ಮಾ ಹೇಳಿದ್ದಾರೆ.