ಕೆಎನ್ಎನ್ಡಿಜಿಟಲ್ಡೆಸ್ಕ್: ಪೈನಾಪಲ್ ಅನ್ನು ಊಷ್ಣ ಅನಾನಸ್ ಎಂತಲೂ ಕರೆಯುತ್ತಾರೆ. ಹುಳಿ ಸಿಹಿ ಅಂಶವಿರುವ ಈ ಹಣ್ಣನ್ನು ಇಷ್ಟಪಟ್ಟು ತುನ್ನುವವರ ಸಂಖ್ಯೆ ಕಡಿಮೆ ಎನ್ನಬಹುದು. ಆದರೆ ಇದರಲ್ಲಿರುವ ಪ್ರೋಟೀನ್, ಪೋಷಕಾಂಶಗಳು ಮುಖದ ಮೇಲಿನ ಮೊಡವೆಯಿಂದ ಹಿಡಿದು ಕ್ಯಾನ್ಸರ್ ವಿರುದ್ಧ ಹೋರಾಡಲೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಹೆಚ್ಚು ಹುಳಿ ಅಂಶವಿರುವ ಈ ಅನಾನಸ್ ಹಣ್ಣಿನಲ್ಲಿ ವಿಟಾಮಿನ್ ಎ,ಬಿ,ಸಿ, ಮ್ಯಾಗ್ನೀಸ್, ಪೊಟ್ಯಾಶಿಯಂ, ಸತು ಹಾಗು ದೇಹಕ್ಕೆ ಬೇಕಾದ ಅತ್ಯಗತ್ಯ ಖನಿಜಾಂಶಗಳು ಇದರಲ್ಲಿದೆ. ಅನಾನಸ್ ಅಥವಾ ಪೈನಾಪಲ್ನ ಮತ್ತೊಂದು ವಿಶೇಷತೆ ಏನೆಂದರೆ ಇದು ಜೋರೋ ಕೊಲೆಸ್ಟ್ರಾಲ್ ಹೊಂದಿದೆ. ಇದು ನಾಲಿಗೆಗೂ ರುಚಿ ಹಾಗು ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಪೈನಾಪಲ್ ತಿನ್ನುವುದರಿಂದ ಮಾನಸಿಕ ಒತ್ತಡ ನಿವಾಣೆಯಾಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಸಮೃದ್ಧವಾದ ಆಂಟಿಆಕ್ಸಿಡೆಂಟ್ಗಳು ಒತ್ತಡವನ್ನು ನಿವಾರಣೆ ಮಾಡುವ ಗುಣ ಹೊಂದಿದೆ. ಇದರಲ್ಲಿ ಫ್ಲೇವನಾಯ್ಡ್ಸ್ ಹಾಗು ಫೇನೋಲಿಕ್ ಆಸಿಡ್ಗಳು ಇದ್ದು ಇದರ ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘಕಾಲದ ಉತ್ತಮ ಪರಿಣಾಮ ಬೀರಲಿದೆ. ನಿರಂತವಾಗಿ ಹಾಗು ನಿಯಮಿತವಾಗಿ ಪೈನಾಪಲ್ ಸೇವಿಸಿದರೆ ದೇಹಕ್ಕೆ ರೋಗನಿರೋಧಕ ಶಕ್ತಿ ಅಧಿಕವಾಗುತ್ತದೆ.
ಪೈನಾಪಲ್ ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಕ್ಯಾಲೋರಿ ಹೊಂದಿದೆ. ಈ ಹಣ್ಣು ಸೇವನೆಯಿಂದ ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಪೊಟ್ಯಾಶಿಯಂ, ಕೊಬ್ಬಿನಾಶ, ತಾಮ್ರ. ಥೈಯಾಮಿನನ್, ವಿಟಮಿನ್ ಸಿ ಅಂಶ ಈ ಎಲ್ಲವುಗಳು ದೇಹಕ್ಕೆ ಒಟ್ಟಿಗೆ ಸಿಕ್ಕಂತಾಗುತ್ತದೆ.
ವಿಪರೀತವಾಗಿ ಶೀತವಾದರೆ ಪೈನಾಪಲ್ ಸೇವಿಸಲು ಅಡ್ಡಿಯಿಲ್ಲ. ಕಾರಣ ಈ ಹಣ್ಣಿನಲ್ಲಿ ಬ್ರೋಮಲೇನ್ ಎಂಬ ಅಂಶವಿದ್ದು, ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿ ಇದೆ. ನೆಗಡಿ ಕೆಮ್ಮನಿಂತ ರಕ್ಷಿಸಿಕೊಳ್ಳು ಈ ಹಣ್ಣು ಸೇವಿಸಬಹುದು. ಹೆಚ್ಚು ಸೇವನೆ ಅಡ್ಡ ಪರಿಣಾಮ ಉಂಟಾಗಬಹುದು. ಆದರೆ ಕೆಮ್ಮು ಇದ್ದರೆ ಪೈನಾಪಲ್ ಸೇವನೆ ಬೇಡ ಇದರಲ್ಲಿರುವ ಹುಳಿ ಅಂಶ ಇನ್ನಷ್ಟು ಗಂಟಲು ನೋವು ಮಾಡಿ ಕೆಮ್ಮನ್ನು ಕೆಲವೊಮ್ಮೆ ಹೆಚ್ಚು ಮಾಡುವ ಸಂಭವವಿರುತ್ತದೆ. ಇಂತಹ ಸಂದರ್ಭದಲ್ಲಿ ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದೇ ಸೂಕ್ತ.
ಪೈನಾಪಲ್ ಮ್ಯಾಗ್ನೀಸ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲಪಡಿಸುತ್ತದೆ. ಆಗಾಗ ಅನಾನಸ್ ಸೇವಿಸಿದರೆ ವಯಸ್ಸಾದ ಮೇಲೆ ಕಣ್ಣಿನ ಮೇಲೆ ಮೂಡುವ ಪೊರೆಯ ಬೆಳವಣಿಗೆಯನ್ನು ನಿಧಾಗೊಳಿಸಬಹುದು. ಇದರಲ್ಲಿರವ ಸಿ ಸತ್ವ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಗಳು ದೇಹದಲ್ಲಿನ ಬೇಡವಾದ ರಾಸಾಯನಿಕಗಳನ್ನು ಹೊರಹಾಕುತ್ತದೆ, ಇದರಿಂದ ಕ್ಯಾನ್ಸರ್ ಸಂಭವ ತೀರಾ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ.
ಪೈನಾಪಲ್ ಚರ್ಮದ ಆರೈಕೆಗೆ ತುಂಬಾ ಉತ್ತಮವಾದ ಹಣ್ಣು. ಹಣ್ಣನ್ನು ಸೇವಿಸುತ್ತಾ ಬಂದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಮೊಡವೆಗಳು ನಿಯಂತ್ರಣಕ್ಕೆ ಬರುತ್ತದೆ ಹಾಗು ಇದರಿಂದ ಮಾಡಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ತೊಳೆದರೆ ಮೃದುವಾದ ಮುಖದ ಚರ್ಮ ಪಡೆಯಬಹುದು.