ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬೂದುಗುಂಬಳಕಾಯಿಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಅನೇಕ ಖನಿಜಾಂಶಗಳು ಅಡಗಿವೆ. ಇದು ಶುಭ ಸಮಾರಂಭಕ್ಕೆ ಎಷ್ಟು ಮುಖ್ಯವೋ ಆರೋಗ್ಯ ವೃದ್ಧಿಗೂ ಅಷ್ಟೇ ಮುಖ್ಯವಾಗಿದೆ. ಬೂದುಗುಂಬಳಕಾಯಿಯ ಜ್ಯೂಸ್ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ.
ಬೂದುಗುಂಬಳಕಾಯಿಯ ಜ್ಯೂಸ್ ಮಾಡುವ ವಿಧಾನ: ಇದು ತುಂಬಾ ಸರಳವಾಗಿದೆ. ಒಂದು ಲೋಟ ಜ್ಯೂಸ್ ಪ್ರಮಾಣಕ್ಕೆ ಒಂದು ಜಾಮೂನ್ ಬಟ್ಟಲಷ್ಟು ಕತ್ತರಿಸಿದ ಬೂದುಗುಂಬಳಕಾಯಿಯನ್ನು ತೆಗೆದುಕೊಳ್ಳಿ. ಕತ್ತರಿಸಿದ ಬೂದುಗುಂಬಳಕಾಯಿ ಪೀಸ್‌ಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ ಮುಕ್ಕಾಲು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಿ. ಇದನ್ನು ಸೋಸಿಕೊಂಡು ಹಾಗೆಯೇ ಕುಡಿಯಬಹುದು. ಅಥವಾ ಚಿಟಿಕೆ ಸೈಂದ್ರಲವಣ ಕಲಿಸಿಕೊಂಡು ಕುಡಿಯಬಹುದು. ಇನ್ನೂ ಬೇಕಿದ್ದರೆ ಒಂದೆರಡು ಹನಿ ನಿಂಬೆ ರಸ ಸೇರಿಸಿಕೊಳ್ಳಬಹುದು. ಆದಷ್ಟು ತಾಜಾ ಇದ್ದಾಗಲೇ ಈ ಜ್ಯೂಸ್ ಅನ್ನು ಸೇವಿಸಿ.
ಬೂದುಗುಂಬಳಕಾಯಿಯಲ್ಲಿ ಕೊಬ್ಬು ಪ್ರೋಟೀನ್, ವಿಟಮಿನ್ ಎ, ಬಿ1, ಬಿ2, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ, ಫೈಬರ್, ಕಾರ್ಬೋಹೈಡ್ರೇಟ್, ಝಿಂಕ್ ಹೀಗೆ ಇನ್ನು ಅನೇಕ ಜೀವಸತ್ವಗಳು ಇದರಲ್ಲಿ ಇವೆ. ಕೇವಲ ಇದೊಂದರ ಜ್ಯೂಸ್ ನಿತ್ಯ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಒಟ್ಟಿಗೆ ಈ ಎಲ್ಲಾ ಜೀವಸತ್ವಗಳು ದೊರೆಯುತ್ತವೆ. ಹಾಗಾಗಿ ಇದನ್ನು ಜೀವಸತ್ವಗಳ ಕಣಜ ಎಂದು ಕರೆಯುತ್ತಾರೆ.
ಬೊಜ್ಜು ಕರಗಿಸುತ್ತದೆ: ಬೂದುಗುಂಬಳಕಾಯಿ ಜ್ಯೂಸ್ ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ. ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಬೊಜ್ಜನ್ನು ಕರಗಿಸುತ್ತದೆ. ದೀರ್ಘಕಾಲದವರೆಗೆ ಬೂದುಗುಂಬಳಕಾಯಿ ಜ್ಯೂಸ್‌ನ್ನು ನಿಯಮಿತವಾಗಿ ಸೇವಿಸಿದರೆ ಬೊಜ್ಜು ಕರಗಿ ದೇಹದ ತೂಕವನ್ನು ಹೆಚ್ಚಾಗದಂತೆ ನಿಯಂತ್ರಿಸುತ್ತದೆ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು: ಬೂದುಗುಂಬಳಕಾಯಿ ಜ್ಯೂಸ್ ಮೆದುಳನ್ನು ಚುರುಕುಗೊಳಿಸುತ್ತದೆ. ಇದರಲ್ಲಿರುವ ಕಬ್ಬಿನಾಂಶವು ಮೆದುಳಿಗೆ ಸೂಕ್ತ ಪ್ರಮಾಣದ ಆಮ್ಲಜನಕವನ್ನು ಒದಗಿಸುತ್ತದೆ. ಇದು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ವಿಶೇಷವಾಗಿ ಮಕ್ಕಳ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ.
ಕ್ಯಾನ್ಸರ್ ಹಿಮ್ಮೆಟ್ಟಿಸುತ್ತದೆ: ಬೂದುಗುಂಬಳಕಾಯಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇದ್ದು ಇದು ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ಪ್ರತಿ ದಿನ ಬೂದುಗುಂಬಳಕಾಯಿ ಜ್ಯೂಸ್ ಸೇವಿಸಿದರೆ ಕ್ಯಾನ್ಸರ್‌ನ ಅಪಾಯವನ್ನು ತಡೆಯಬಹುದು ಎಂದ ಆಹಾರ ತಜ್ಞರು ಹೇಳುತ್ತಾರೆ. ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ನಿಮ್ಮ ವೈದ್ಯರ ಸಲಹೆ ಮೇರೆಗೆ ಇದರ ಜ್ಯೂಸ್ ಸೇವನೆ ಮಾಡಿದ್ರೆ ಉತ್ತಮ.
ಮಲಬದ್ಧತೆ ನಿವಾರಣೆ ಮಾಡುತ್ತದೆ: ಇದರಲ್ಲಿ ಫೈಬರ್ ಅಂಶ ಹೇರಳವಾಗಿ ಇರುತ್ತದೆ. ಈ ಅಂಶ ಕರುಳನ್ನು ಶುಚಿಗೊಳಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇನ್ನು ಕರುಳಿನಲ್ಲಿ ಆಹಾರ ಗಟ್ಟಿಯಾಗುವುದನ್ನು ಸಹ ತಡೆಯುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಯಾಗುತ್ತದೆ. ಇನ್ನು ನಿಯಮಿತವಾಗಿ ಇದರ ಜ್ಯೂಸ್ ಸೇವನೆಯಿಂದ ದೇಹದಲ್ಲಿ ಊಷ್ಣ ಪ್ರಮಾಣವನ್ನು ತಗ್ಗಿಸುತ್ತದೆ.
ಹೃದಯದ ಆರೋಗ್ಯ ಕಾಪಾಡುತ್ತದೆ: ಇದರಲ್ಲಿರುವ ಸಾಲಿಬರ್ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮಪ್ರಮಾಣದಲ್ಲಿ ಇರಿಸುತ್ತದೆ. ಬೂದುಗುಂಬಳಕಾಯಿ ಸೇವೆನೆಯಿಂದ ಕೊಲೆಸ್ಟ್ರಾಲ್‌ನಿಂದ ಉತ್ಪತ್ತಿಯಾಗುವ ಟಾಕ್ಸಿನ್‌ಗಳನ್ನು ತೆಗೆದುಹಾಕಬಹುದು. ಇದು ರಕ್ತದೊತ್ತಡ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಜೀರ್ಣಕ್ರಿಯೆ ಉತ್ತಗೊಳಿಸುತ್ತದೆ: ಬೂದುಗುಂಬಳಕಾಯಿ ಅನೇಕ ದಿವ್ಯ ಔಷಧೀಯ ಗುಣಗಳನ್ನು ಹೊಂದಿದೆ. ಹೊಟ್ಟೆಗೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳಿಗೆ ಇದರ ಜ್ಯೂಸ್ ರಾಮಬಾಣದಂತೆ ಕೆಲಸ ಮಾಡುತ್ತದೆ. ಆಸಿಡಿಟಿ, ಉರಿಯೂತ, ಅಲ್ಸರ್, ಪ್ರತ್ಯಾಮ್ಲ, ಆಮ್ಲಪಿತ್ತ, ಹುಳಿತೇಗು ಹೀಗೆ ಎಲ್ಲಾ ರೀತಿಯ ಹೆಟ್ಟೆ ಸಮಸ್ಯೆಗಳಿಗೆ ಶಮನಕಾರಿಯಾಗಿದೆ. ಇದರಲ್ಲಿರುವ ಡಯೇಟ್ರಿ ಫೈಬರ್ ಜೀರ್ಣಕ್ರಿಯೆಯನ್ನು ಸರಾಗವಾಗುವಂತೆ ಮಾಡುತ್ತದೆ. ನಿತ್ಯ ಇದರ ಜ್ಯೂಸ್ ಸೇವೆನ ಹೊಟ್ಟೆ ಮತ್ತು ಕರುಳಿನ ಆರೋಗ್ಯ ಸುಧಾರಿಸುವಲ್ಲಿ ಎರಡು ಮಾತಿಲ್ಲ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.