ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಈ ಲೇಖನದ ಮೂಲಕ ಮುಖದ ಮೇಲಿನ ಸುಕ್ಕು ನೆರಿಗೆ ಹಾಗು ಮೊಡವೆಗಳನ್ನು ಹೋಗಲಾಡಿಸಿ ನಿಮ್ಮ ಮುಖದ ಚರ್ಮದ ಆರೋಗ್ಯ ಹೆಚ್ಚಿಸಿ ನಿಮ್ಮ ವಯಸ್ಸನ್ನು ಮುಚ್ಚಿಡುವಂತೆ ಮಾಡುತ್ತವೆ ಈ ಫೇಸ್ ಪ್ಯಾಕ್‌ಗಳು. ಇವೆಲ್ಲಾ ನೈಸರ್ಗಿಕ ಹಾಗು ಯಾವುದೇ ಅಡ್ಡ ಪರಿಣಾಮವಿಲ್ಲದ ಫೇಸ್ ಪ್ಯಾಕ್‌ಗಳು.
ಒಂದೆರಡು ಚಮಚ ಅಕ್ಕಿ ಹಿಟ್ಟಿಗೆ ಶುದ್ಧ ಹಸಿ ಹಾಲು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಮುಖವನ್ನು ಚೆನ್ನಾಗಿ ತೊಳೆದು ಈ ಪೇಸ್ಟ್ ಹಚ್ಚಿಕೊಂಡು ಹದಿನೈದು ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಮುಖ ಕ್ಲೆಂಸಿಂಗ್ ಆಗುತ್ತದೆ. ತ್ವಚೆ ಮೃದುವಾಗಿ, ಚರ್ಮ ಹೊಸ ಯವ್ವನ ಪಡೆದುಕೊಳ್ಳುತ್ತದೆ.
ಮೊಸರಿಗೆ ಜೇನುತುಪ್ಪ ಕಲಿಸಿ ಮುಖಕ್ಕೆ ಪ್ಯಾಕ್ ಹಾಕಿಕೊಳ್ಳಿ. ಇದು ಒಣ ಚರ್ಮ ಇದ್ದವರಿಗೆ ತುಂಬಾ ಉತ್ತಮ ರಿಸಲ್ಟ್ ಕೊಡುತ್ತದೆ. ಮೊಸರಿನ ಜಿಡ್ಡಿನಾಂಶ ಚರ್ಮಕ್ಕೆ ಸೇರಿಕೊಳ್ಳುತ್ತದೆ. ಚಳಿಗಾಲದಲ್ಲಿ ಈ ಪ್ಯಾಕ್ ಎಲ್ಲರಿಗೂ ಸೂಕ್ತ.
ಚೆನ್ನಾಗಿ ಮಾಗಿದ ಬಾಳೆಹಣ್ಣನು ಕಿವುಚಿ ಇದಕ್ಕೆ ರೋಸ್ ವಾಟರ್ ಬೆರಸಿ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಚರ್ಮ ಬಿಗಿದಂತೆ ಆಗುತ್ತದೆ, ಆಗ ಮುಖವನ್ನು ತುಸು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮೊಟ್ಟೆಯ ಬಿಳಭಾವನ್ನಷ್ಟೇ ಎತ್ತಿಟ್ಟುಕೊಳ್ಳಿ. ಇದಕ್ಕೆ ಹತ್ತಿ ತುಂಡನ್ನು ಅದ್ದಿ ಮುಖಕ ತುಂಬೆಲ್ಲಾ ಹಚ್ಚಿಕೊಳ್ಳಿ. ಸುಮಾರು ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ನಿಮ್ಮ ಚರ್ಮದ ಮೇಲಿನ ಸುಕ್ಕು ದಿನೇ ದಿನೇ ಮಾಯವಾಗುತ್ತದೆ.
ಪಪ್ಪಾಯ ಸಿಪ್ಪೆಯನ್ನು ಬೀಸಾಡುವ ಮುನ್ನ ಹೀಗೆ ಮಾಡಿ, ಸಿಪ್ಪೆಯನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ ಸ್ವಲ್ಪ ಹೊತ್ತು ನಂತರ ಮುಖ ತೊಳೆಯಿರಿ. ಮುಖ ಹೊಳೆಯುವಂತಾಗುತ್ತದೆ. ಹೀಗೆಲ್ಲಾ ನೈಸರ್ಗಿಕ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಹಾಕಿಕೊಂಡರೆ ತ್ವಚೆ ಹೊಳೆಯುತ್ತದೆ. ಮೃದುವಾಗಿರುತ್ತದೆ. ಹಾಗು ಸದಾ ಯುವಕರಂತೆ ಕಾಣುಸುತ್ತೀರಿ.