ನವದೆಹಲಿ: ಉತ್ತರಾಖಂಡದಲ್ಲಿ ಆಗಸ್ಟ್ 12 ಮತ್ತು 13 ರ ಮಧ್ಯರಾತ್ರಿ ಉತ್ತರ ಪ್ರದೇಶದ ಮೊರಾದಾಬಾದ್ನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಆಗಸ್ಟ್ 12 ರಂದು ಬಾಲಕಿ ದೆಹಲಿಯಿಂದ ಉತ್ತರಾಖಂಡ್ ರಸ್ತೆ ಸಾರಿಗೆ ಬಸ್ ಮೂಲಕ ಡೆಹ್ರಾಡೂನ್ಗೆ ಬಂದಿದ್ದಳು. ಐಎಸ್ಬಿಟಿಯಲ್ಲಿ ಉತ್ತರಾಖಂಡ್ ರಸ್ತೆ ಸಾರಿಗೆ ಬಸ್ನಲ್ಲಿ ಮಧ್ಯರಾತ್ರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವರದಿಯಾಗಿದೆ. ಆದಾಗ್ಯೂ, ವೈದ್ಯಕೀಯ ವರದಿ ಇನ್ನೂ ಬಾಕಿ ಇದೆ ಅಂತ ಸ್ತಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಂಡಿಯಾ ಟುಡೇ ಟಿವಿಯೊಂದಿಗೆ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮೇಲ್ವಿಚಾರಕಿ ಸರೋಜಿನಿ, “13 ರಂದು ಬೆಳಿಗ್ಗೆ, 2:00 ರಿಂದ 2:30 ರ ನಡುವೆ, ಬಾಲಕಿ ದಿಕ್ಕು ತೋಚದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಹುಡುಗಿ ಮಾನಸಿಕವಾಗಿ ಅಸ್ಥಿರಳಾಗಿ ಕಾಣುತ್ತಿದ್ದಳು. ಯಾವುದೇ ಬಾಹ್ಯ ಗಾಯಗಳು ಅಥವಾ ರಕ್ತಸ್ರಾವ ಕಂಡುಬಂದಿಲ್ಲ, ಆದರೆ ಯಾವುದೇ ಆಂತರಿಕ ಗಾಯಗಳಿವೆಯೇ ಎಂದು ನಾವು ಖಚಿತಪಡಿಸಲು ಸಾಧ್ಯವಿಲ್ಲ. ನಂತರ ಆಕೆಯನ್ನು ಕಲ್ಯಾಣ ಕೇಂದ್ರಕ್ಕೆ ಕಳುಹಿಸಲಾಯಿತು ಅಂತ ತಿಳಿಸಿದ್ದಾರೆ. .