ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಯು ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಇದೇ ಸಮಯದಲ್ಲಿ ಇಂಧನ ಇಲಾಖೆಯು ಗೃಹಜ್ಯೋತಿ ಗ್ರಾಹಕರಿಗಾಗಿ ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿದೆ.
ಹಳೆ ಮನೆಯ ಆರ್‌ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಹೊಸ ಮನೆಯ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ಗೃಹಜ್ಯೋತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸೇವಾ ಸಿಂಧು ಪೋರ್ಟಲ್‌ನ https://sevasindhu.karnataka.gov.in/…/GetAadhaarData.aspx ವೆಬ್‌ಸೈಟ್ ಪ್ರವೇಶಿಸಿ ಆರ್‌ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡಬಹುದು. ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಮಾಡಿ ಸೇವೆ ಪಡೆಯಬಹುದು.
ಮನೆ ಬದಲಾಯಿಸುವಾಗ ಈ ಹಿಂದೆ ಆ ಮನೆಯಲ್ಲಿ ವಾಸವಿದ್ದವರ ಆಧಾರ್ ಸಂಖ್ಯೆ ಜೊತೆ ಆರ್‌ಆರ್ ನಂಬರ್ ಲಿಂಕ್ ಆಗಿದೆಯೇ ಅಥವಾ ಅವರು ಡಿ-ಲಿಂಕ್ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಆಗಿರದಿದ್ದರೆ ಡಿ-ಲಿಂಕ್ ಮಾಡಿ, ಹೊಸದಾಗಿ ಆರ್‌ಆರ್ ನಂಬರ್‌ಗೆ ಆಧಾರ್ ಲಿಂಕ್ ಮಾಡಬೇಕು.
ಮನೆ ಬದಲಾಯಿಸಿದವರಿಗೆ/ಬಾಡಿಗೆದಾರರಿಗೆ ಗೃಹ ಜ್ಯೋತಿ ಡಿ-ಲಿಂಕ್ ಸೌಲಭ್ಯ ಇದೀಗ ಲಭ್ಯ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.
SevaSindhu Guarantee Schemes Portal https://t.co/bsGvzlXleZ
or click on below link https://t.co/6H4KymdKwU #Bescom#GruhaJyothi#GruhaJyothischeme#Guaranteescheme… pic.twitter.com/UJasyBnB1s
— Namma BESCOM | ನಮ್ಮ ಬೆಸ್ಕಾಂ (@NammaBESCOM) August 8, 2024