ಹೊಸಪೇಟೆ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಜಮೀರ್ ಅಹ್ಮದ್ ಖಾನ್ ಅವರನ್ನು ನೇಮಕ ಮಾಡಲಾಗಿದೆ. ಬಿ.ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸದ್ಯಕ್ಕೆ ಜಮೀನ್ ಅಹ್ಮದ್ ಖಾನ್ ಅವರನ್ನೇ ನೇಮಕ ಮಾಡಿರುವುದಾಗಿ ಸಿಎಂ ಸಿದ್ಧರಾಮಯ್ಯ ಮಾಹಿತಿ ನೀಡಿದರು.
ಇಂದು ಅವರು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಜಿಲ್ಲೆಯಲ್ಲಿ ಪ್ರಸ್ತುತ 200 ಬೆಡ್ ಆಸ್ಪತ್ರೆ ಕಾರ್ಯ ನಡೆಯುತ್ತಿದೆ. ಆದರೆ ಬೇಡಿಕೆ ಹಿನ್ನೆಲೆಯಲ್ಲಿ ಇದನ್ನು 400 ಬೆಡ್ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ.
ನರೇಗಾದಲ್ಲಿ ಸಮಯಕ್ಕೆ ಸರಿಯಾಗಿ ಮಾನವ ದಿನಗಳ ಕೂಲಿ ಹಣ ಪಾವತಿಯಾಗಬೇಕು. ಅನಗತ್ಯ ಲೇಟ್ ಆಗಬಾರದು ಎನ್ನುವ ಸೂಚನೆ ನೀಡಿದರು.
ನರೇಗಾದಲ್ಲಿ ಅಂಗನವಾಡಿ ಕಟ್ಟಡಗಳು, ಶಾಲೆ ಕೊಠಡಿಗಳು, ಕಾಂಪೌಂಡ್ ಬೇಡಿಕೆಗಳು, ಊಟದ ಗುಣಮಟ್ಟ , ಅಡುಗೆ ಕೋಣೆಗಳು ಮತ್ತು ಶೌಚಾಲಯಗಳ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಪ್ರಮಾಣಕ್ಕೆ ತಕ್ಕಂತೆ ಸವಲತ್ತುಗಳನ್ನು ಒದಗಿಸುವಂತೆ ಸೂಚನೆ ನೀಡಿದರು.
ಕಲುಶಿತ ನೀರು ಕುಡಿದ ಜನರ ಆರೋಗ್ಯ ಮತ್ತು ಜೀವಕ್ಕೆ ತೊಂದರೆ ಆದರೆ ಅದಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಗಳೇ ಹೊಣೆ. ಜಿಲ್ಲೆಯಲ್ಲಿ ಹಿಂದಿನ ಸರ್ಕಾರ ಈ ಭಾಗಕ್ಕೆ ಒಂದೂ ಮನೆ ಕೊಟ್ಟಿಲ್ಲ. ನೀವು 500 ಕೋಟಿ ಕೊಟ್ಟಬಳಿಕ 1500 ಮನೆಗಳನ್ನು ಪೂರ್ಣಗೊಳಿಸಿ ಜನರಿಗೆ ವಿತರಿಸಿದ್ದೇವೆ. ಬಾಕಿ 1600 ಕ್ಕೂ ಮನೆಗಳನ್ನು ಸ್ಲಂ ಬೋರ್ಡ್ನಿಂದ ಪೂರ್ಣಗೊಳಿಸಿ ಜನರಿಗೆ ವಿತರಿಸುತ್ತೇವೆ. ಒಟ್ಟು ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಈ ವರ್ಷದೊಳಗೆ ವಿತರಿಸುವಂತೆ ಸೂಚಿಸಿದರು.
ಈಗಾಗಲೇ 41 ಕೆರೆಗಳನ್ನು ತುಂಬಿಸಿ ಚಾಲ್ತಿ ನೀಡಲಾಗಿದೆ. ಈ ಮಳೆಗಾಲದಲ್ಲಿ ಬಾಕಿ ಇರುವ 9 ಕೆರೆಗಳನ್ನು ತುಂಬಿಸಿ ಲೋಕಾರ್ಪಣೆ ಮಾಡಲು ಸೂಚಿಸಿದರು.
BREAKING: IAS ಅಧಿಕಾರಿ ರೋಹಿಣಿ ಸಿಂಧೂರಿ, ಪತಿ ವಿರುದ್ಧ ‘ಖ್ಯಾತ ಗಾಯಕ ಲಕ್ಕಿ ಆಲಿ’ ಲೋಕಾಯುಕ್ತಕ್ಕೆ ದೂರು
BREAKING : ‘ಹಜ್ ಯಾತ್ರೆ’ ವೇಳೆ 68 ಅಲ್ಲ, 98 ಭಾರತೀಯರು ಸಾವು : ವಿದೇಶಾಂಗ ಸಚಿವಾಲಯ ಮಾಹಿತಿ