ಪದವಿ ಮತ್ತು ಡಿಪ್ಲೊಮಾ ಪರೀಕ್ಷೆ ಮುಗಿದ ತಕ್ಷಣ ವ್ಯಾಸಂಗ ಮುಂದುವರೆಸಿದರೆ ಅಥವಾ ಕೆಲಸಕ್ಕೆ ಸೇರದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಲು ಮಾಹಿತಿ ನೀಡಲು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಯುವ ನಿಧಿ ಯೋಜನೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಯುವನಿಧಿ ನೋಂದಣಿಗೆ ಸಂಬAಧಿಸಿದAತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಲೇಜುಗಳ ಹಾಗೂ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರುಗಳು ಸಭೆ ನಡೆಸಿ ನೋಂದಣಿ ಕಾರ್ಯವನ್ನು ಪ್ರಾರಂಭಿಸಿ ಹಾಸನ ಜಿಲ್ಲೆಯಲ್ಲಿ ಹೆಚ್ಚು ನೋಂದಣಿ ಮಾಡಬೇಕೆಂದು ಹಾಗೂ ನೋಂದಣಿಗೆ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಉತ್ತೀðಣರಾದ ಅಭ್ಯರ್ಥಿಗಳ ಪಟ್ಟಿ ಪಡೆದು, ನೋಂದಣಿ ಅಧಿಕಗೊಳಿಸಬೇಕೆಂದು ತಿಳಿಸಿದರು.
ನೋಂದಣಿಗೆ ಪರಿಶೀಲನೆಗೆ ಸಂಬಂಧಿಸಿದಂತೆ, ಉದ್ಯೋಗಾಧಿಕಾರಿಗಳು, ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ಪರಿಶೀಲನೆಗೆ ಲಾಗಿನ್ ನೀಡಲಾಗಿದ್ದು, ಕರ್ನಾಟಕದಲ್ಲಿ 6 ವರ್ಷಗಳೊಂದಿಗೆ ವಾಸಿಸುತ್ತಿರುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಎಲ್ಲಾ ಮೂಲದಾಖಲಾತಿಗಳನ್ನು ಪಡೆದು ಪರಿಶೀಲಿಸಿ, ಅನುಮೋದನೆ ನೀಡಿ, ವೆಬ್‌ಸೈಟ್‌ಗೆ ರವಾನಿಸಿದ ನಂತರ ನೇರ ನಗದು ವರ್ಗಾವಣೆಗೆ ಪರಿಶೀಲಿಸಲಾಗುವುದು. ನಂತರ ಎಲ್ಲಾ ಕಾಲೇಜು ಪ್ರಾಂಶುಪಾಲರು ಓಂಆ NAD (National Advisory Deposit) ನಲ್ಲಿ ಫಲಿತಾಂಶ ಬಂದ ತಕ್ಷಣ ವಿದ್ಯಾರ್ಥಿಗಳ ಮಾಹಿತಿಯನ್ನು ಅತೀ ತುರ್ತಾಗಿ ಅಳವಡಿಸಿ ಯುವನಿಧಿ ನೋದಂಣಿಗೆ ಅನುಕೂಲ ಮಾಡಿಕೊಡಲು ಸೂಚಿಸಿದರು.
ಯುವನಿಧಿ ಪ್ಲಸ್ ಯೋಜನೆಯಡಿ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ ರವರ ನಿರ್ದೇಶನದಂತೆ ಯುವನಿಧಿ ಫಲಾನುಭವಿಗಳಿಗೆ KOUSHALKAR ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊAಡಲ್ಲಿ ಮಾತ್ರ ಮುಂದೆಯು ನೇರ ನಗದು ವರ್ಗಾವಣೆಯಾಗುವುದಾಗಿದ್ದು, ಇಲ್ಲದಿದ್ದಲ್ಲಿ ನೇರ ನಗದು ವರ್ಗಾವಣೆಯನ್ನು ತಕ್ಷಣ ಸ್ಥಗಿತಗೊಳುವ ಷರತ್ತು ವಿಧಿಸಿರುವುದರಿಂದ ಕಡ್ಡಾಯವಾಗಿ ತಮ್ಮ ಹೆಸರನ್ನು KOUSHALKAR ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡ ನಂತರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಜಿ.ಟಿ.ಟಿ.ಸಿ ಹಾಗೂ ಸಿಡಾಕ್ ಸಂಸ್ಥೆಗಳ ಮೂಲಕ ತರಬೇತಿ ಪಡೆಯಬೇಕೆಂದು ಸೂಚಿಸಿದ್ದು, ತರಬೇತಿಯ ನಂತರವು ನೇರ ನಗದು ವರ್ಗಾವಣೆಯಾಗುತ್ತದೆ ಎಂದು ತಿಳಿಸಿದರು.
ಮೂರು ತಿಂಗಳಿಗೊಮ್ಮೆ ಯುವನಿಧಿ ಫಲಾನುಭವಿಗಳು ಸ್ವಯಂಘೊಷಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಸ್ವಯಂಘೊಷಣೆಯಾದಲ್ಲಿ ಮಾತ್ರ ನೇರ ನಗದು ವರ್ಗಾವಣೆಯಾಗುವುದು ಎಂದು ತಿಳಿಸಿರುತ್ತಾರೆ. ಆದುದರಿಂದ ಹಾಸನ ಜಿಲ್ಲೆಯಲ್ಲಿ ಇರುವ ಎಲ್ಲಾ ನಿರುದ್ಯೋಗಿ ಪದವಿದರರನ್ನು ಯುವನಿಧಿಗೆ ನೊಂದಾಯಿಸಿಕೊAಡು ನಿರುದ್ಯೊಗಭತ್ಯೆಯನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಮಕ್ಕಳಿಗೆ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂದು ಪ್ರೌಢಶಾಲೆಗಳ ಹಂತದಲ್ಲಿಯೇ ತಿಳುವಳಿಕೆ ನೀಡಬೇಕು ಎಂದು ತಿಳಿಸಿದರಲ್ಲದೆ, ಶಾಲಾ ಕಾಲೇಜುಗಳ ಮಕ್ಕಳ ಆರೋಗ್ಯ ತಪಾಸಣೆೆ, ಮಾದಕ ವಸ್ತುಗಳ ಸೇವನೆ ಬಗ್ಗೆ ಆಂದೋಲನದ ರೀತಿಯಲ್ಲಿ ಅರಿವು ಮೂಡಿಸಿ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಕ್ರೀಯಾಶೀಲವಾಗಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ನಾಡಿನ ಕಲೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದಾದರೂ ಕಂಪನಿಯೊAದಿಗೆ ಒಪ್ಪಂದ ಮಾಡಿಕೊಂಡು ಮಕ್ಕಳಿಗೆ ತರಬೇತಿ ನೀಡಿದರೆ ಉಪಯುಕ್ತವಾಗುತ್ತದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರಲ್ಲದೆ, ಕೌಶಲ್ಯ ತರಬೇತಿ ಪಡೆದ ನಂತರ ಯಾವ ರೀತಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.
100 ರಲ್ಲಿ 30 ಮಕ್ಕಳು ಪರೀಕ್ಷೆಯಲ್ಲಿ ಫೇಲಾಗುವ ಮಕ್ಕಳು ತಪ್ಪು ದಾರಿಯಲ್ಲಿ ನಡೆಯುವ ಮೂಲಕ ಕುಟುಂಬ ಮತ್ತು ಸಮಾಜಕ್ಕೆ ಹೊರೆ ಆಗುತ್ತಾರೆ. ಇದನ್ನು ತಪ್ಪಿಸಲು ಚಿಂತನೆ ನಡೆಸಬೇಕು ಎಂದು ತಿಳಿಸಿದರು.