ಬೆಂಗಳೂರು: ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ವಿವಾಹ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಲಾಗಿದೆ. ಈ ಹೊತ್ತಿನಲ್ಲೇ ವಕೀಲ ಪ್ರಸಾದ್ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿಗೆ ಅಕ್ರಮ ಸಂಬಂಧ ಇತ್ತು ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ಹಂಚಿಕೊಂಡ ಅವರು, ಯುವ ರಾಜ್ ಕುಮಾರ್ ಗೆ ಶ್ರೀದೇವಿ ಭೈರಪ್ಪ ಬೆದರಿಕೆ ಹಾಕಿದ್ದಾರೆ. ಅವರು ಬೆದರಿಕೆ ಹಾಕಿರೋ ಮೆಸೇಜ್ ನಮ್ಮ ಬಳಿಯಲ್ಲಿ ಇದ್ದಾವೆ. ಅದರಲ್ಲಿ ನಿನ್ನ ನಾನು ಬಿಡೋದಿಲ್ಲ. ಸುಲಭವಾಗಿ ಡಿವೋರ್ಸ್ ತೆಗೆದುಕೊಳ್ಳೋದಕ್ಕೆ ಆಗಲ್ಲ. ನಿನ್ನನ್ನು ನಾನು ಬೀದಿಗೆ ತರುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರೋದಾಗಿ ತಿಳಿಸಿದರು.
ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಒಳ್ಳೆಯ ಹುಡುಗಿ ಅಲ್ಲವೇ ಅಲ್ಲ. ಹೀಗಿದ್ದರೂ ಯುವ ರಾಜ್ ಕುಮಾರ್ ರಿಸ್ಕ್ ತೆಗೆದುಕೊಂಡು ಮದುವೆಯಾಗಿದ್ದರು. ಇಂದಲ್ಲ ನಾಳೆ ಬದಲಾಗಬಹುದು ಎಂದು ಕಾದ. ಆದ್ರೇ ಅದು ಸಾಧ್ಯವಾಗಲಿಲ್ಲ. ಮಗು ಮಾಡಿಕೊಳ್ಳೋದಕ್ಕೆ ಶ್ರೀದೇವಿ ಹಿಂದೇಟು ಹಾಕಿದಳು. ಇದಕ್ಕಾಗಿಯೇ ಯುವನನ್ನು ಆಕೆ ಬೈಯ್ಯುತ್ತಿದ್ದಳು ಎಂದು ಆರೋಪಿಸಿದರು.
ಇದಷ್ಟೇ ಅಲ್ಲ ಶ್ರೀದೇವಿ ಭೈರಪ್ಪಗೆ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಇದೆ. ಆಕೆ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಯುವ ರಾಜ್ ಕುಮಾರ್ ಅವರನ್ನು ಅಕೆಯ ಬಾಯ್ ಫ್ರೆಂಡ್ ಜೊತೆ ಕಂಪೇರ್ ಕೂಡ ಮಾಡುತ್ತಿದ್ದಳು. ಅಲ್ಲದೇ ಆತನೊಂದಿಗೆ ಮಗು ಮಾಡಿಕೊಳ್ಳುತ್ತೇನೆ ಅಂತ ಹೆದರಿಸಿದ್ದಾಳೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
BREAKING: ಬೆಂಗಳೂರಲ್ಲಿ ನಮ್ಮ ‘ಮೆಟ್ರೋ ರೈಲು’ ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ
GOOD NEWS : SSLC-2 ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ‘ಉಚಿತ ಪ್ರಯಾಣ’ ಕಲ್ಪಿಸಿದ ‘BMTC’