ಬೆಂಗಳೂರು : ಸುದ್ದಿ ಜಾಲತಾಣಗಳಲ್ಲಿ ಅಗ್ರಸ್ಥಾನದಲ್ಲಿರುವ ‘ಒನ್ ಇಂಡಿಯಾ’ ಹೊಸದಾಗಿ AI-ಚಾಲಿತ ವೀಡಿಯೊ ನಿರ್ಮಾಣ ಸ್ಟುಡಿಯೋ ‘ಸ್ಪಾರ್ಕ್ ಒರಿಜಿನಲ್ಸ್’ ಅನ್ನು ಪರಿಚಯಿಸುತ್ತಿದೆ. ವಿಡಿಯೋ ನಿರ್ಮಾಣ, ಎಡಿಟ್ ಮೊದಲಾದ ಅಂಶಗಳಲ್ಲಿ ಸೃಜನಶೀಲತೆ ಹುಟ್ಟುಹಾಕುವ ಮತ್ತು ಬಹುಭಾಷೆಗಳಲ್ಲಿ ಸಿಗುವ ಎಐ ಚಾಲಿತ ವಿಡಿಯೋ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದ ಹೊಸ ಯೂಟ್ಯೂಬ್ ಚಾನಲ್ ಆರಂಭವಾಗಲಿದೆ.
ಹಿಂದಿ, ತಮಿಳು, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ, ಒಡಿಯಾ, ಬಂಗಾಳಿ, ಗುಜರಾತಿ ಮತ್ತು ಮರಾಠಿ ಹಾಗೂ ಇಂಗ್ಲಿಷ್, ಅರೇಬಿಕ್, ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆ ಸೇರಿದಂತೆ ಬಹುಭಾಷಾ ಸಾಮರ್ಥ್ಯಗಳಲ್ಲಿ AI ಆಧಾರಿತ ವೀಡಿಯೊ ಕಂಟೆಂಟ್ ರಚಿಸಲು ಈ ಯೂಟ್ಯೂಬ್ ಹೆಚ್ಚು ಸಹಕಾರಿಯಾಗಿದೆ.
‘ಒನ್‌ಇಂಡಿಯಾ’ ಸಂಸ್ಥೆಯು ತನ್ನ AI-ಚಾಲಿತ ವೀಡಿಯೊ ನಿರ್ಮಾಣ ಸ್ಟುಡಿಯೋ ಸ್ಪಾರ್ಕ್ ಒರಿಜಿನಲ್ಸ್ ಅನ್ನು ಹೊರ ತರಲು ಸಜ್ಜಾಗಿದೆ. ಇದು ಚಲನಚಿತ್ರ ನಿರ್ಮಾಪಕರು, ಜಾಹೀರಾತುದಾರರು ಮತ್ತು ರಚನೆಕಾರರಿಗೆ ಉನ್ನತ ಶ್ರೇಣಿಯ ವಿಡಿಯೋ ನಿರ್ಮಾಣಕ್ಕೆ ಹುಡುಕುವವರಿಗೆ ಇದು ಪರಿಹಾರ ಒದಗಿಸಲಿದೆ.
ಸ್ಪಾರ್ಕ್ ಒರಿಜಿನಲ್ಸ್ ವಿಡಿಯೋ ನಿರ್ಮಾಣ, ವೇಗ ಹೆಚ್ಚಿಸಲು AI ಮತ್ತು ಸಂಪಾದನಾ ಸಾಫ್ಟ್‌ವೇರ್ ಬಳಕೆ ಮಾಡಲಾಗಿದೆ. ಇಲ್ಲಿ ಸೂಕ್ಷ್ಮವಾಗಿ ಟ್ಯೂನ್ ಮಾಡಿದ ದೃಶ್ಯಗಳನ್ನು ಉತ್ಪಾದಿಸಬಹುದು. ಮಾನವ ಮತ್ತು AI ಸೃಜನಶೀಲತೆಯಡಿ ವಿಡಿಯೋಗಳು ನಿರ್ಮಾಣಗೊಳ್ಳುತ್ತವೆ.
ನವೀನ AI ತಂತ್ರಜ್ಞಾನ ನವೀನದೊಂದಿಗೆ ಸಂಯೋಜಿಸಿ ದೈನಂದಿನ ಸಾಮಾನ್ಯ ವಿಡಿಯೋಗಳು, ಕ್ರಿಯಾತ್ಮಕ ಅನಿಮೇಷನ್‌ಗಳು, ಸ್ಕೆಚ್-ಶೈಲಿಯ ದೃಶ್ಯಗಳು ಮತ್ತು ವಿವರವಾದ ಪರಿಸರಗಳನ್ನು ಇಲ್ಲಿ ಸೃಷ್ಟಿಸಬಹುದಾಗಿದೆ. ಬೇರೆ ಬೇರೆ ಸಂಯೋಜನಾತ್ಮಕ ಕಲ್ಪನೆಗಳಿದ್ದು ಅವುಗಳು ಮುಂದಿನ ದಿನಗಳಲ್ಲಿ ಸ್ಪಾರ್ಕ್ ಯೂಟ್ಯೂಬ್ ಸಾರ್ವಜನಿಕೊಳ್ಳಲಿವೆ. ಶೀಘ್ರವೇ ನಿಮ್ಮ ಮುಂದೆ ಬರಲಿದೆ.
AI ವೀಡಿಯೊ ನಿರ್ಮಾಣವು ಸೃಜನಶೀಲತೆ, ಕಾರ್ಯ ವಿಧಾನವನ್ನು ತಿಳಿಯಲು ನೀವು ಇಲ್ಲಿನ ಸ್ಪಾರ್ಕ್ ಒರಿಜಿನಲ್ಸ್ ಟೀಸರ್ ವೀಕ್ಷಿಸಬಹುದು. ವಿಡಿಯೋ ಇಲ್ಲಿದೆ ನೋಡಿ…
ಸ್ಪಾರ್ಕ್ ಒರಿಜಿನಲ್ಸ್ ಪ್ರಮುಖ ಅಂಶಗಳು
* AI ಆಧಾರಿತ ಕಥೆ: ಈ ಸ್ಪಾರ್ಕ್ AI-ಚಾಲಿತ ಕಥೆಗಳನ್ನು ಸುಂದರ ವಿರಿಯೋ ಮೂಲಕ ಹೇಳುತ್ತದೆ. AI ಮತ್ತು ಸೃಜನಶೀಲ ಅತ್ಯುತ್ತಮ ಹಾಗೂ ಆಕರ್ಷಕ ವೀಡಿಯೋ ನಿರೂಪಣೆಯ ಕಲ್ಪನೆಗಳು ಇಲ್ಲಿರುತ್ತವೆ.
* ದೃಶ್ಯ ಮೂಲ ಮಾದರಿ: ವಿಡಿಯೋ ನಿರ್ಮಾಣದ ಸಮಯ ಉಳಿಸಲು ಮತ್ತು ಉತ್ಪಾದನೆ ಹೆಚ್ಚಿಸುತ್ತದೆ. ವಿಡಿಯೋದಲ್ಲಿ ಪ್ರತಿ ಸಿನ್‌ಗಳು, ಬೆಳಕು ಮತ್ತು ಸಂಯೋಜನೆ ಉತ್ತಮಗೊಳಿಸುತ್ತದೆ.
* ಪೂರ್ಣ ಪೂರ್ವ-ನಿರ್ಮಾಣ ಬೆಂಬಲ: ಯೂಟ್ಯೂಬ್ ಸ್ಕ್ರಿಪ್ಟ್‌ನಿಂದ ಪರದೆಯವರೆಗೆ, ಯೋಜನೆಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡಲಿದೆ.
B2B ಫೋಕಸ್
ಈ AI-ಚಾಲಿತ ನಿರ್ಮಾಣ ಸ್ಟುಡಿಯೊದ ಸಾಮರ್ಥ್ಯಗಳು ಚಲನಚಿತ್ರ ನಿರ್ಮಾಪಕರು, ಸೃಷ್ಟಿಕರ್ತರು ಮತ್ತು ಜಾಹೀರಾತುದಾರರ ಸಹಯೋಗದೊಂದಿಗೆ ಚಲನಚಿತ್ರಗಳು, ಟೀಸರ್‌ಗಳು ಮತ್ತು ಮೂಲ ಮಾದರಿಗಳ ರಚನೆ ಮೇಲೂ ಕೇಂದ್ರೀಕರಿಸಲಾಗುತ್ತಿದೆ.
ಬಹುಭಾಷೆಗಳಲ್ಲಿ ವೀಡಿಯೊ ನಿರ್ಮಾಣಳ್ಳುವ ಕಾರಣದಿಂದ ಭಾರತದ ಆಯಾ ಪ್ರಾದೇಶಿಕ ಭಾಷಿಗರು ತುಂಬ ಹತ್ತಿರವಾಗುತ್ತದೆ. ಈ ಯೂಟ್ಯೂಬ್ ಚಾನಲ್ ಮನರಂಜನೆ, ಕ್ರೀಡೆ, ತಂತ್ರಜ್ಞಾನ, ಹಣಕಾಸು, ಶಿಕ್ಷಣ ಮತ್ತು ಜೀವನಶೈಲಿ ಸೇರಿದಂತೆ ವೈವಿಧ್ಯಮಯ ಬೇಡಿಕೆಗಳನ್ನು ಪೂರೈಸುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು ಯೋಜನೆಗಳನ್ನು ಸ್ಪಾರ್ಕ್ ಒರಿಜಿನಲ್ಸ್ ಮೂಲಕ ಕಸ್ಟಮೈಸ್ ಮಾಡಬಹುದಾಗಿದೆ.
B2C ಫೋಕಸ್
B2C ವಿಭಾಗವು AI ಅನಿಮೇಷನ್‌ಗಳಿಂದ ಹಿಡಿದು YouTube ಮತ್ತು Instagram ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾದ ಜೀವನ-ರೀತಿಯ ವೀಡಿಯೊಗಳವರೆಗೆ ವೈವಿಧ್ಯಮಯ ವಿಷಯಗಳ ಮೇಲೆ ಕೇಂದ್ರಿಕರಿಸುತ್ತದೆ. ಅದೇ ರೀತಿಯ ವಿಡಿಯೋಗಳನ್ನು ರಚಿಸುತ್ತದೆ. ಈ ವಿಡಿಯೋಗಳ ಮೂಲಕ ನಿರ್ಮಾಣದಲ್ಲಿ ತೊಡಗಿಸುವುದು ಮತ್ತು ಆ ಬಗ್ಗೆ ಶಿಕ್ಷಣ ಒದಗಿಸಿ ಸ್ಫೂರ್ತಿ ನೀಡುವ ಗುರಿ ಇದೆ.
ಸ್ಥಳೀಯ ಮತ್ತು ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಾಂಪ್ರದಾಯಿಕ ಮತ್ತು ಡಿಜಿಟಲ್ ಮಾಧ್ಯಮ ಎರಡನ್ನೂ ಬಳಸಿಕೊಂಡು ಜಾಗೃತಿ ಮೂಡಿಸುವ ಉದ್ದೇಶ ಸ್ಪಾರ್ಕ್‌ಓರಿಜಿನಲ್ ಹೊಂದಿದೆ. ಸ್ಥಳೀಯ ಅಪರಾಧ, ಐತಿಹಾಸಿಕ ಘಟನೆಗಳು, ವೈಜ್ಞಾನಿಕ ಆವಿಷ್ಕಾರಗಳು ಮತ್ತು ಪರಿಸರ ಸಮಸ್ಯೆಗಳಂತಹ ವಿಷಯಗಳನ್ನು ಒಳಗೊಂಡ ಸ್ಪಾರ್ಕ್ ಒರಿಜಿನಲ್ಸ್, ಮಾಹಿತಿ ಮತ್ತು ಪ್ರೇರೇಪಿಸುವ ಕಥೆ ರಚಿಸುತ್ತದೆ. ಇದರಲ್ಲಿ ಕುತೂಹಲವನ್ನು ಹುಟ್ಟಿಸುವಂತೆ ವಿಡಿಯೋ ರಚಿಸುತ್ತದೆ.
ಸ್ಪಾರ್ಕ್ ಒರಿಜಿನಲ್ಸ್ ಅನ್ವೇಷಣೆಗೆ ಹೀಗೆ ಮಾಡಿ
AI ಕಲಾತ್ಮಕ ದೃಷ್ಟಿ ಪೂರೈಸಲು ಸೃಷ್ಟಿಯಾಗಿರುವ ಈ ಸ್ಪಾರ್ಕ್ ಒರಿಜಿನಲ್ಸ್ ವೇದಿಕೆಯು ಸ್ಫೂರ್ತಿಯಾಗುತ್ತದೆ. ಹೊಸ ಕಥೆಗಾರರು ಮತ್ತು ಕಲಾವಿದರ ಗುಂಪಿನಲ್ಲಿ ಕೆಲಸ ಮಾಡುವ ವಿಡಿಯೋ ನಿರ್ಮಾಣದ ಆಸಕ್ತರು ಈ ಸ್ಪಾರ್ಕ್ ಒರಿಜಿನಲ್ಸ್ ಯೂಟ್ಯೂಬ್‌ಗೆ ಭೇಟಿ ನೀಡಬಹುದು.
ಸ್ಪಾರ್ಕ್ ಒರಿಜಿನಲ್ಸ್ ಕುರಿತ ಮಾಹಿತಿ
ಸ್ಪಾರ್ಕ್ ಒರಿಜಿನಲ್ಸ್ ಒಂದು ಒನ್‌ಇಂಡಿಯಾ ವೆಂಚರ್ ಆಗಿದೆ. B2B ಮತ್ತು B2C ಪ್ರೇಕ್ಷಕರಿಗೆ AI-ಚಾಲಿತ ವೀಡಿಯೊ ನಿರ್ಮಾಣವನ್ನು ತಿಳಿಸುತ್ತದೆ. ಬ್ರ್ಯಾಂಡ್‌ಗಳು, ಚಲನಚಿತ್ರ ನಿರ್ಮಾಪಕರು ಮತ್ತು ರಚನೆಕಾರರು ಮುಖ್ಯವಾದ ಕಥೆಗಳನ್ನು ಹೇಳಲು ಸಹಾಯ ಮಾಡುವ ಉದ್ದೇಶದಿಂದ ಪರಿಣಾಮಕಾರಿ ವಿಷಯಗಳನ್ನು ನವೀನ ವೀಡಿಯೋ ಮೂಲಕ ಹೇಳಲು AI ಶಕ್ತಿಯೊಂದಿಗೆ ಕಲಾತ್ಮಕ ದೃಷ್ಟಿ ಸಂಯೋಜಿಸಲಾಗಿದೆ.
ಸಿನಿಮಾ ನಿರ್ಮಿಸುವುದು, ಮಾರ್ಕೆಟಿಂಗ್ ಪ್ರಚಾರ ಮಾಡುವುದಿರಲಿ, ಸಾಮಾಜಿಕ ಮಾಧ್ಯಮ ವೀಡಿಯೊಗಳನ್ನು ನಿರ್ಮಿಸುವುದೇ ಇರಲಿದೆ. ಸ್ಪಾರ್ಕ್ ಒರಿಜಿನಲ್ಸ್ ನಿಮ್ಮ ಕಥೆಯನ್ನು ಸಾಧ್ಯವಾದಷ್ಟು ಪ್ರಭಾವಶಾಲಿ ರೀತಿಯಲ್ಲಿ ಹೇಳಲು ಸಹಾಯ ಮಾಡುತ್ತದೆ.