ಬೆಂಗಳೂರು: ನಗರದಲ್ಲಿ ಹಿಟ್ ಅಂಡ್ ರನ್ ಗೆ ಮತ್ತೊಂಬು ಬಲಿಯಾಗಿದೆ. ಬೆಂಗಳೂರಿನ ಕೆ ಆರ್ ಪುರಂನ ಭಟ್ಟರಹಳ್ಳಿ ಸಿಗ್ನಲ್ ಬಳಿಯಲ್ಲಿ ನಡೆದಂತ ಭೀಕರ ಅಪಘಾತದಲ್ಲಿ ಸ್ವಿಗ್ಗಿ ಡಿಲವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತನನ್ನ ನೇಪಾಳ ಮೂಲದ ಸುರೇಂದರ್ ಬಹದ್ದೂರ್(38) ಎಂಬುದಾಗಿ ತಿಳಿದು ಬಂದಿದೆ. ಸ್ವಿಗ್ಗಿಯಲ್ಲಿ ಸುರೇಂದರ್ ಬಹದ್ದೂರ್ ಕೆಲಸ ಮಾಡುತ್ತಿದ್ದರು. ಡೆಲಿವರಿ ಕೊಡಲು ಹೋಗುವಾಗ ಬೈಕ್ ಗೆ ಕಾರು ಡಿಕ್ಕಿಯಾಗಿ ಈ ಅಫಘಾತ ಸಂಭವಿಸಿದೆ.
ಸ್ವಿಗ್ಗಿ ಆರ್ಡರ್ ತೆಗೆದುಕೊಂಡು ಕೊಡೋದಕ್ಕೆ ತೆರುವಾಗ ಕಾರೊಂದು ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಸುರೇಂದರ್ ಬಹದ್ದೂರ್ ಸಾವನ್ನಪ್ಪಿದರೂ ಕಾರು ಚಾಲಕ ಪರಾರಿಯಾಗಿದ್ದಾನೆ. ಕಾರು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೆ ಆರ್ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ರಾಜ್ಯದಲ್ಲಿದ್ದಾರೆ ‘10,365 ಟ್ರಾನ್ಸ್ ಜೆಂಡರ್’: ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷಾ ವರದಿ








