ಯುವನಿಧಿ ಯೋಜನೆಯಡಿ ನೋಂದಾಯಿತರಾಗಿ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿರುವ ಫಲಾನುಭವಿಗಳು ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿಯನ್ನು ಪಡೆಯಲು ಕೌಶಲ್ಕರ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ನೊಂದಣಿಯಾಗಲು ಸೂಚಿಸಲಾಗಿದೆ. ತರಬೇತಿ ಅವಧಿಯಲ್ಲಿ ಯುವನಿಧಿ ನಿರುದ್ಯೋಗ ಭತ್ಯೆಯನ್ನು ಪಡೆಯಲು ಯಾವುದೇ ತೊಂದರೆ ಇರುವುದಿಲ್ಲ. ಫಲಾನುಭವಿಗಳು ಕೌಶಲ್ಕರ್ ಪೋರ್ಟ್ನಲ್ಲಿ ನೊಂದಾಯಿಸದಿದ್ದರೆ, ಅವರ ಭತ್ಯ ಸ್ಥಗಿತಗೊಳಿಸುವ ಷರತ್ತು ವಿಧಿಸಲಾಗಿದೆ.
ಔದ್ಯೋಗಿಕ ಬೇಡಿಕೆಗಳ ಅನುಸಾರವಾಗಿ ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆ ತರಬೇತಿ ನೀಡಿ ಶೇ.70 ರಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಲಾಗುವುದು. ಫಲಾನುಭವಿಗಳು www.kaushalkar.com/app/registration-verify ಕೌಶಲ್ಕರ್ ಈ ಪೋರ್ಟಲ್ನಲ್ಲಿ ನೊಂದಾಯಿಸಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬಹುದು.
ವಿದೇಶದಲ್ಲಿ ಉದ್ಯೋಗಾಸಕ್ತಿ ಹೊಂದಿರುವ ನರ್ಸಿಂಗ್ ವ್ಯಾಸಾಂಗ ಮಾಡಿರುವ ಹಾಗೂ ಮಾಡುತ್ತಿರುವವರಿಗೆ ಉಚಿತವಾಗಿ ವಿದೇಶಿ ಭಾಷಾ ತರಬೇತಿ ನೀಡಲಾಗುದೆ. ಆಸಕ್ತರು http://nursesflt.ksdckarnataka.com ಪೊರ್ಟ್ಲ್ನಲ್ಲಿ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ನಗರದ ಸರಸ್ವತಿಪುರಂ 3ನೇ ಕ್ರಾಸ್, ರಾಯಲ್ ಓಕ್ ಕಟ್ಟಡದ ಹಿಂಬಾಗದಲ್ಲಿರುವ ಕಛೇರಿ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ 7338674796, 7338674791 ಗೆ ಕರೆ ಮಾಡುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ ತಿಳಿಸಿದ್ದಾರೆ.