ಉತ್ತರ ಕನ್ನಡ: ಜಿಲ್ಲೆಯಲ್ಲಿ ಯುವಕನೋರ್ವ ರಾಮ ಮಂದಿರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದನು. ಮಂದಿರ ಕೆಡವಿ ಮತ್ತೆ ಮಸೀದಿ ಕಟ್ಟೋದಾಗಿ ಹಾಕಿದ್ದ ಪೋಸ್ಟ್ ವೈರಲ್ ಆಗಿತ್ತು. ಈ ಸಂಬಂಧ ದಾಖಲಾದಂತ ದೂರಿನ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಜೀವನಗರದ ನಿವಾಸಿಯಾಗಿದ್ದಂತ ಶಕೀಲ್ ಅಹ್ಮದ್ (23) ಎಂಬಾತ ಇನ್ ಸ್ಟಾಗ್ರಾಂನಲ್ಲಿ ರಾಮಮಂದಿರದ ವಿರುದ್ಧ ಪೋಸ್ಟ್ ಹಾಕಿದ್ದನು. ಈ ಹಿನ್ನಲೆಯಲ್ಲಿ ಆತನ ವಿರುದ್ಧ ಶಿರಸಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಶಕೀಲ್ ಹಾಕಿದ್ದಂತ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ರಾಮಮಂದಿರ ಕೆಡವಿ ಬಾಬ್ರಿ ಮಸೀದಿ ಪುನರ್ ನಿರ್ಮಿಸೋದಾಗಿ ಹೇಳಿದ್ದನು. ಹೀಗಾಗಿ ಆತನ ವಿರುದ್ಧ ದೂರು ದಾಖಲಾಗಿತ್ತು.
ಈ ದೂರಿನ ಹಿನ್ನಲೆಯಲ್ಲಿ ಶಕೀಲ್ ಅಹ್ಮದ್ ನನ್ನು ಶಿರಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ರಾಮಮಂದಿರದ ವಿರುದ್ಧ ಪೋಸ್ಟ್ ಹಾಕಿದಂತ ಯುವಕ ಜೈಲು ಪಾಲು ಆಗುವಂತೆ ಆಗಿದೆ.
2021-22ರಲ್ಲಿ ‘ಉನ್ನತ ಶಿಕ್ಷಣದಲ್ಲಿ’ ದಾಖಲಾತಿ 4.33 ಕೋಟಿಗೆ ಏರಿಕೆ: 2014 ರಿಂದ 26.5 ರಷ್ಟು ಹೆಚ್ಚಳ: ಸಮೀಕ್ಷೆ
BREAKING: ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೆ ‘ಬಿಜೆಪಿ ಉಸ್ತುವಾರಿ’ಗಳು ನೇಮಕ, ಇಲ್ಲಿದೆ ಸಂಪೂರ್ಣ ಲೀಸ್ಟ್