ಶಿವಮೊಗ್ಗ : ಬದುಕಿನಲ್ಲಿ ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದದ್ದು ಅದನ್ನು ವ್ಯವಸ್ಥಿತವಾಗಿ ಮುನ್ನಡೆಸಬೇಕು. ನಿಮ್ಮ ಸಣ್ಣ ತಪ್ಪು ಭವಿಷ್ಯವನ್ನು ಬಲಿ ತೆಗೆದುಕೊಳ್ಳಬುಹದು. ಯಾವುದೇ ಸಂದರ್ಭದಲ್ಲೂ ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕಳೆದುಕೊಳ್ಳಬೇಡಿ. ಓದಿನ ಕಡೆ ಹೆಚ್ಚು ಗಮನ ಹರಿಸಿ ಎಂಬುದಾಗಿ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 2025-26ನೇ ಸಾಲಿನ ಕ್ರೀಡೆ ಸಾಂಸ್ಕೃತಿಕ ಎನ್.ಎಸ್.ಎಸ್. ಸೇರಿ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದಂತ ಅವರು, ಬಾಹ್ಯಾಕರ್ಷಣೆ ನಿಮ್ಮನ್ನು ವಿದ್ಯಾಭ್ಯಾಸ ಬಿಟ್ಟು ದಾರಿ ತಪ್ಪಿಸಬಹುದು. ಮೊಬೈಲ್, ಇಂಟರ್‌ನೆಟ್‌ನoತಹ ಎಲೆಕ್ಟಾನಿಕ್ ವಸ್ತುಗಳನ್ನು ನಿಮ್ಮ ಏಳಿಗೆಗೆ ಬಳಸಿಕೊಳ್ಳಬೇಕೆ ವಿನಃ, ಅದಕ್ಕೆ ದಾಸರಾಗಿ ತಪ್ಪುದಾರಿಯತ್ತ ಹೋಗಬಾರದು ಎಂಬುದಾಗಿ ತಿಳಿಸಿದರು.
ನನಗೂ ಪದವಿ ಓದುವ ಅವಕಾಶ ಸಿಕ್ಕಿದ್ದರೆ ಇನ್ಯಾವುದೋ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿತ್ತು. ಆದರೆ ಬಡತನ ನನ್ನಂತ ಅನೇಕ ಜನರ ಶಿಕ್ಷಣ ಮುಂದುವರೆಸಲು ಸಾಧ್ಯವಾಗದೇ ತೊಡಕಾಗಿ ಬಿಟ್ಟಿತು. ಈಗಿನ ಮಕ್ಕಳಿಗೆ ಶಿಕ್ಷಣ ಮುಂದುವರೆಸಲು ಆರ್ಥಿಕ ಸಮಸ್ಯೆ ಇಲ್ಲ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿದೆ. ನಿಮಗೆ ವಿದ್ಯಾಭ್ಯಾಸ ಮಾಡಲು ಆರ್ಥಿಕ ಸಮಸ್ಯೆ ಇದ್ದರೆ ನನ್ನನ್ನು ಭೇಟಿಯಾಗಿ, ಅಗತ್ಯ ಸಹಕಾರ ನೀಡುತ್ತೇನೆ ಎಂಬುದಾಗಿ ಹೇಳಿದರು.
ಇಂದು ಜಗತ್ತಿಗೆ ನಾಯಕತ್ವ ನೀಡುವ ಹಂತಕ್ಕೆ ಭಾರತ ಬೆಳೆದಿದೆ ಎಂದರೆ ನಮ್ಮಲ್ಲಿನ ಶೈಕ್ಷಣಿಕ ಗುಣಮಟ್ಟವೂ ಪ್ರಮುಖ ಕಾರಣ. ದೊಡ್ಡದೊಡ್ಡ ರಾಷ್ಟಗಳು ನಮ್ಮ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಾರ್ಪೆಟ್ ಹಾಸಿ ಸ್ವಾಗತಿಸುತ್ತಿದೆ. ನಮ್ಮಲ್ಲಿ ಬೌದ್ಧಿಕ ಗುಣಮಟ್ಟ ಉತ್ಕೃಷ್ಟವಾಗಿದೆ. ಬದುಕಿನ ಬಗ್ಗೆ ಭರವಸೆ ಇರಿಸಿಕೊಳ್ಳುವ ಜೊತೆಗೆ ಪೋಷಕರು ಕಂಡ ಕನಸು ನನಸು ಮಾಡೋದು ಮರೆಯಬೇಡಿ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹೇಳಿದರು.
ಇನ್ನೂ ರಾಯಚೂರು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಶಿವಾನಂದ ಕೆಳಗಿನಮನಿ ಮಾತನಾಡಿ, ಪದವಿ ಹಂತದಲ್ಲಿ ಮಕ್ಕಳು ತಪ್ಪಸ್ಸಿನಂತೆ ಶಿಕ್ಷಣದಲ್ಲಿ ತೊಡಗಿಕೊಳ್ಳಬೇಕು. ಮೊಬೈಲ್‌ಗೆ ದಾಸರಾಗುವ ಬದಲು ಮೊಬೈಲ್ ಮಾದರಿ ಪರಿಕರ ಕಂಡು ಹಿಡಿಯುವ ವಿಜ್ಞಾನಿಗಳಾಗಬೇಕು. ನಿಮ್ಮೊಳಗಿನ ಶಕ್ತಿಯ ಅರಿವು ನಿಮಗೆ ಇರಬೇಕು. ಎಂತಹ ಸಂದರ್ಭದಲ್ಲಿಯೂ ದೃತಿಗೆಡದೆ ಗುರಿ ತಲುಪುವತ್ತ ಗಮನ ಹರಿಸಿ ಎಂದು ತಿಳಿಸಿದರು.
ಈ ವೇಳೆ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿದರು. ಪ್ರಾಚಾರ್ಯ ಡಾ. ಸಣ್ಣಹನುಮಪ್ಪ ಜಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ. ಸುರೇಶ್ ಗೌಡ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ, ಎಲ್.ಚಂದ್ರಪ್ಪ, ಪ್ರಮುಖರಾದ ಐ.ಜಿ.ಪ್ರಕಾಶ್, ಈಳಿ ಶ್ರೀಧರ್, ಯಶೋದಮ್ಮ, ಸಂತೋಷ್ , ಡಾ. ಮಮತಾ ಹೆಗಡೆ, ಡಾ. ಕುಂಸಿ ಉಮೇಶ್ . ಅಮೃತ . ಆಶ್ರಿತಾ , ಪ್ರೊ. ಮೇಘಾ, ಸುಷ್ಮ, ಅಶ್ವಥ್ ಇತರರು ಹಾಜರಿದ್ದರು.
BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್ ಜಾರಿ








