ಪಂಜಾಬ್: ನಿಮ್ಮ ಶೌರ್ಯ ಆಪರೇಷನ್ ಸಿಂಧೂರ್‌ನ ಯಶಸ್ಸಿಗೆ ಕಾರಣವಾಗಿದೆ ಎಂಬುದಾಗಿ ಹೇಳಿದಂತ ಪ್ರಧಾನಿ ನರೇಂದ್ರ ಮೋದಿಯವರು, ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ಅಲ್ಲದೇ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಯಶಸ್ವಿಗೆ ಕಾರಣವಾದಂತ ಸಶಸ್ತ್ರ ಪಡೆಗಳನ್ನು ಪ್ರಧಾನಿ ನರೇಂದ್ರ ಮೋದಿ ವಂದಿಸಿದರು.
ಇಂದು ಆದಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾಡಿದ ಅವರು, ಭಾರತ್ ಮಾತಾ ಕಿ ಜೈ ಎಂಬುದು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿರುವ ಪ್ರತಿಯೊಬ್ಬ ಸೈನಿಕನ ಸಂಕಲ್ಪ. ಇದು ದೇಶಕ್ಕಾಗಿ ಬದುಕಲು ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಲು ಬಯಸುವ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. ನಮ್ಮ ಡ್ರೋನ್‌ಗಳು, ಕ್ಷಿಪಣಿಗಳು ನಮ್ಮ ಶತ್ರುಗಳನ್ನು ಹೊಡೆದಾಗ, ಅವರು ‘ಭಾರತ್ ಮಾತಾ ಕಿ ಜೈ’ ಎಂದು ಕೇಳುತ್ತಾರೆ ಎಂದು ಹೇಳಿದರು.
#WATCH | At the Adampur Air Base, PM Narendra Modi says "'Bharat Mata ki Jai' maidaan mein bhi goonjti hai aur mission mein bhi. Jab Bharat ke sainik Maa Bharati bolte hai toh dushman ke kaleje kaanp jaate hai…"
He says "Bharat Mata ki Jai is the resolve of every soldier who… pic.twitter.com/NbDgG0TKu1
— ANI (@ANI) May 13, 2025
“ಆಪರೇಷನ್ ಸಿಂಧೂರ್” ಕಾರ್ಯಾಚರಣೆಯಿಂದ ಶತ್ರುಗಳು ತೀವ್ರವಾಗಿ ನಲುಗಿದೆ. ಈ ವಾಯುನೆಲೆ ಮತ್ತು ನಮ್ಮ ಇತರ ಹಲವಾರು ವಾಯುನೆಲೆಗಳ ಮೇಲೆ ದಾಳಿ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ಅವರು ನಮ್ಮನ್ನು ಮತ್ತೆ ಮತ್ತೆ ಗುರಿಯಾಗಿಸಿಕೊಂಡರು ಆದರೆ ಪಾಕಿಸ್ತಾನದ ದುಷ್ಟ ಯೋಜನೆಗಳು ಪ್ರತಿ ಬಾರಿಯೂ ವಿಫಲವಾದವು” ಎಂದು ಅದಮ್ಪುರ್ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
#WATCH | At the Adampur Air Base, PM Narendra Modi said, "Rattled with #OperationSindoor, the enemy tried to attack this air base and several of our other air bases multiple times. They targeted us again and again but the nefarious designs of Pakistan failed each time.". pic.twitter.com/elRUmUDUgr
— ANI (@ANI) May 13, 2025