ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಕಣ್ಣಿಗೆ ಕಾರಾದ ಪುಡಿ ಎರಚಿ ಯುವತಿ ಕತ್ತು ಕೊಯ್ಡು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಮಂತ್ರಿ ಮಾಲ್ ಹಿಂಭಾಗದಲ್ಲಿರುವ ರೈಲ್ವೆ ಟ್ರಾಕ್ ಬಳಿ ನಡೆದಿದೆ.
ಕೊಲೆಯಾದ ಯುವತಿಯನ್ನು ಯಾಮಿನಿ ಪ್ರಿಯ ಅಂತ ಗುರುತಿಸಿದ್ದು, ವಿಗ್ನೇಶ್ ಎನ್ನುವ ಯುವಕ ಡ್ರಾಗರ್ ತರಹದ ವಸ್ತುವಿನಿಂದ ಯುವತಿಯ ಮೇಲೆ ಹೊಟ್ಟೆ ಮತ್ತು ಕುತ್ತಿಗೆಯಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದು, ಸದ್ಯ ಶ್ರೀರಾಮ ಪುರ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.