ಬೆಂಗಳೂರು: ರಾಜ್ಯದಲ್ಲಿ ಬಿಸಿಲ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಅದರಲ್ಲೂ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ತಾಪಮಾನ ಮಾತ್ರ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ. ಅದೆಷ್ಟು ಅಂತ ಮುಂದೆ ಓದಿ.
ಈ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮಾಹಿತಿ ನೀಡಿದ್ದು, ರಾಜ್ಯದ ಜಿಲ್ಲಾವಾರು ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಈ ಕೆಳಗಿನಂತೆ ದಾಖಲಾಗಿದೆ. ಇಂದು ಕೊಪ್ಪಳದಲ್ಲಿ 46.7 ಡಿಗ್ರಿ ಸೆಲ್ಸಿಯರ್ ನಷ್ಟು ದಾಖಲೆಯ ತಾಪಮಾನ ದಾಖಲಾಗಿದೆ ಎಂದಿದೆ.
ಇಂದು ಕೆಲ ಜಿಲ್ಲೆಗಳನ್ನು ಹೊರತು ಪಡಿಸಿದ್ರೇ ಬರುತೇಕ ರಾಜ್ಯದ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಮೇಲೆ ತಾಪಮಾನ ದಾಖಲಾಗಿದೆ. ಈ ಮೂಲಕ ರಾಜ್ಯದ ಜನರು ಬಿಸಿಲ ತಾಪಕ್ಕೆ ಕಂಗೆಡುವಂತೆ ಮಾಡಿದೆ.
ಹೀಗಿದೆ ಜಿಲ್ಲಾವಾರು ತಾಪಮಾನದ ವಿವರ
- ಬೆಂಗಳೂರು ನಗರ- 41.1 ಡಿಗ್ರಿ ಸೆಲ್ಸಿಯಸ್
- ಬೆಂಗಳೂರು ಗ್ರಾಮಾಂತರ- 40.6
- ರಾಮನಗರ-42.2
- ಕೋಲಾರ-43.5
- ಚಿಕ್ಕಬಳ್ಳಾಪುರ- 41.2
- ತುಮಕೂರು- 41.7
- ಚಿತ್ರದುರ್ಗ – 41.3
- ದಾವಣಗೆರೆ-40.9
- ಚಾಮರಾಜನಗರ- 40.6
- ಮೈಸೂರು- 40.8
- ಮಂಡ್ಯ- 41.6
- ವಿಜಯನಗರ-41.4
- ಬಳ್ಳಾರಿ-44.4
- ಕೊಪ್ಪಳ-44.0
- ರಾಯಚೂರು-46.7
- ಯಾದಗಿರಿ- 46.0
- ಕಲಬುರ್ಗಿ – 46.1
- ಬೀದರ್- 43.6
- ಬೆಳಗಾವಿ -41.3
- ಬಾಗಲಕೋಟೆ-42.4
- ವಿಜಯಪುರ-43.9
- ಗದಗ – 42.4
- ಹಾವೇರಿ – 40.7
- ಧಾರವಾಡ-41.1
- ಶಿವಮೊಗ್ಗ-40.1
- ಹಾಸನ-39.9
- ಚಿಕ್ಕಮಗಳೂರು -41.2
- ಕೊಡಗು-36.0
- ದಕ್ಷಿಣ ಕನ್ನಡ-38.8
- ಉಡುಪಿ-39.0
- ಉತ್ತರ ಕನ್ನಡ-39.5
ಜಿಲ್ಲಾವಾರು ಗರಿಷ್ಟ ಹಾಗೂ ಕನಿಷ್ಠ ತಾಪಮಾನ ದಾಖಲಾದ ವಿವರ (ದಿನಾಂಕ 01/05/2024ರ ಬೆಳಗ್ಗೆ 8.30 ರಿಂದ 02/05/2024ರ ಬೆಳಗ್ಗೆ 8.30).
District-wise #Maximum & #Minimum #temperature (˚C) Recorded 02.05.2024. #HeatWave #climatechange #StaySafe pic.twitter.com/Xu0HoyzD5W— Karnataka State Natural Disaster Monitoring Centre (@KarnatakaSNDMC) May 2, 2024
BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ
BREAKING: ಬಳ್ಳಾರಿಯ ‘ಜ್ಯುವೆಲರ್ಸ್ ಶಾಪ್’ನಲ್ಲಿ ‘AC ಸ್ಪೋಟ’ಗೊಂಡು ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ