ನವದೆಹಲಿ : ಪಾಕಿಸ್ತಾನವು ಭಾರತದ ಮೇಲೆ ಮತ್ತೊಂದು ಪಹಲ್ಗಾಮ್ ಶೈಲಿಯ ದಾಳಿ ನಡೆಸಿದರೆ ಪರಿಸ್ಥಿತಿ ತುಂಬಾ ಗಂಭೀರವಾಗಲಿದೆ ಎಂದು ಭಾರತೀಯ ಸೇನೆ ಎಚ್ಚರಿಸಿದೆ. ಆಪರೇಷನ್ ಸಿಂದೂರ್ 2.0 ಹೆಚ್ಚು ಅಪಾಯಕಾರಿಯಾಗಲಿದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಭಾರತದ ಪಶ್ಚಿಮ ಕಮಾಂಡ್’ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಲೆಫ್ಟಿನೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಮಂಗಳವಾರ ಹೇಳಿದ್ದಾರೆ. ಜಮ್ಮುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ಹೇಳಿಕೆಗಳನ್ನ ನೀಡಿದ್ದಾರೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ವಾಯುನೆಲೆಗಳು ಮತ್ತು ಮಿಲಿಟರಿ ಪೋಸ್ಟ್’ಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ನಾಶವಾದವು ಮತ್ತು ಪಾಕಿಸ್ತಾನ ಮತ್ತೊಂದು ದುಸ್ಸಾಹಸವನ್ನ ಮಾಡಿದರೆ ಭಾರತದ ಪ್ರತಿಕ್ರಿಯೆ ತುಂಬಾ ಬಲವಾಗಿರುತ್ತದೆ ಎಂದು ಕಟಿಯಾರ್ ಹೇಳಿದರು. ಪಾಕಿಸ್ತಾನದ ಮನಸ್ಥಿತಿ ಬದಲಾಗದಿದ್ದರೆ ವಿನಾಶ ಅನಿವಾರ್ಯ ಎಂದು ಅವರು ಎಚ್ಚರಿಸಿದರು.
ಲೆಫ್ಟಿನೆಂಟ್ ಜನರಲ್ ಮನೋಜ್ ಕಟಿಯಾರ್ ಅವರು ಆಪರೇಷನ್ ಸಿಂಧೂರ್ ಶ್ಲಾಘಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದೆ ಎಂದು ಅವರು ಹೇಳಿದರು.
1965ರ ಭಾರತ-ಪಾಕಿಸ್ತಾನ ಯುದ್ಧದ 60ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾಜಿ ಸೈನಿಕರ ರ್ಯಾಲಿಯನ್ನು ಉದ್ದೇಶಿಸಿ ಕಟಿಯಾರ್ ಮಾತನಾಡುತ್ತಾ, ಪಾಕಿಸ್ತಾನದಿಂದ ಭವಿಷ್ಯದ ದಾಳಿಗಳನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಹೇಳಿದರು. 1965 ರ ಯುದ್ಧವನ್ನು ನೆನಪಿಸಿಕೊಂಡ ಅವರು, ಜಮ್ಮು ಮತ್ತು ಕಾಶ್ಮೀರದ ಜನರ ದೇಶಭಕ್ತಿಯನ್ನು ಕಡಿಮೆ ಅಂದಾಜು ಮಾಡುವುದೇ ಪಾಕಿಸ್ತಾನದ ಸೋಲಿಗೆ ಕಾರಣ ಎಂದು ಹೇಳಿದರು.
ಎಚ್ಚರ ; ‘AI’ ಬಳಿ ಎಂದಿಗೂ ಈ ಪ್ರಶ್ನೆಗಳನ್ನ ಕೇಳ್ಬೇಡಿ, ಕೇಳಿದ್ರೋ ದೊಡ್ಡ ತೊಂದರೆಗೆ ಸಿಲುಕುತ್ತೀರಿ!
ಕರ್ನಾಟಕದ ‘ಲಕ್ಕುಂಡಿ’ಗೆ ‘UNESCO ಸ್ಥಾನಮಾನ’: ಸಚಿವ ಹೆಚ್.ಕೆ ಪಾಟೀಲ್
ವಿಶಾಖಪಟ್ಟಣಂನಲ್ಲಿ ಭಾರತದ ಅತಿದೊಡ್ಡ ‘ಡೇಟಾ ಸೆಂಟರ್ ಕ್ಯಾಂಪಸ್’ ನಿರ್ಮಾಣಕ್ಕೆ ‘ಅದಾನಿ-ಗೂಗಲ್’ ಪಾಲುದಾರಿಕೆ