ಚಾಮರಾಜನಗರ: ಕರಿಮಣಿ ಮಾಲೀಕ ಹಾಡು ತುಂಬಾನೇ ಫೇಮಸ್ ಆಗಿದೆ. ಅದರಲ್ಲೂ ರೀಸ್ಸ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಂತಹ ಫೇಮಸ್ ಹಾಡಿಗೆ ಕರಿಮಣಿ ಮಾಲೀಕ ನೀನಲ್ಲ ಎಂಬುದಾಗಿ ಪತ್ನಿಯೊಬ್ಬರು ರೀಲ್ಸ್ ಮಾಡಿದ್ದಾರೆ. ಹೀಗೆ ರೀಲ್ಸ್ ಮಾಡಿದ್ದನ್ನು ನೋಡಿದಂತ ಪತಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಚಾಮರಾಜನಗರ ಪಿ.ಜಿ ಪಾಳ್ಯದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ಕುಮಾರ್ ಹಾಗೂ ರೂಪಾ ಅನ್ಯೂನ್ಯವಾಗಿದ್ದರು. ಫೇಸ್ ಬುಕ್ ನಲ್ಲಿ ಆಗಾಗ ರೂಪಾ ರೀಲ್ಸ್ ಕೂಡ ಮಾಡೋ ಗೀಳು ಇತ್ತು. ಈ ಮೊದಲು ವಿವಿಧ ಹಾಡುಗಳಿಗೆ ರೀಲ್ಸ್ ಮಾಡಿದ್ದಂತ ರೂಪ, ಇತ್ತೀಚೆಗೆ ಫೇಮಸ್ ಆಗಿದ್ದಂತ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ್ದಳು.
ರೂಪಾ ಇಂತಹ ಹಾಡಿಗೆ ರೀಲ್ಸ್ ಮಾಡಿದ್ದ ವೀಡಿಯೋವನ್ನು ನೋಡಿದಂತ ಕುಮಾರ್(33) ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಮಾಗಿರೋದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕುಮಾರ್ ಅವರ ಸಹೋದರ ಮಹದೇವ ಸ್ವಾಮಿಯವರು ಹನೂರು ಠಾಣೆಗೆ ದೂರು ನೀಡಿದ್ದು, ತನ್ನ ಸಹೋದರನ ಸಾವಿಗೆ ಪತ್ನಿ ರೂಪಾ ಕಾರಣ. ಅವರು ಕರಿಮಣಿ ಮಾಲೀಕ ನೀನಲ್ಲ ಎಂದು ಪತ್ನಿ ರೀಲ್ಸ್ ಮಾಡಿದ್ದಾರೆ. ಇದರಿಂದಲೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ಹೀಗಿದೆ ‘ರಾಜ್ಯ ಸರ್ಕಾರ’ದಿಂದ ಮಾನ್ಯತೆ ಪಡೆದ ‘ಖಾಸಗಿ ಆಸ್ಪತ್ರೆ’ಗಳ ಪಟ್ಟಿ