ಮೈಸೂರು : ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಯೋಗವನ್ನು ರೂಢಿಗೊಳಿಸಬೇಕೆನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತೆ ಶಾಲೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಶಾಲೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಗ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ, ಬಹಳ ವರ್ಷಗಳಿಂದಲೂ ಶಾಲೆಗಳಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಈ ಪದ್ಧತಿಯನ್ನು ನಿಲ್ಲಿಸಿತ್ತು. ಈಗ ನಮ್ಮ ಸರ್ಕಾರ ಮತ್ತೆ ಆರಂಭಿಸಿದೆ ಎಂದರು.

ಯೋಗಕ್ಕೆ ಯಾವುದೇ ಧರ್ಮ ಇಲ್ಲ, ಯೋಗವನ್ನು ಇಂತಿಷ್ಟೆ ವಯಸ್ಸಿನವರೇ ಮಾಡಬೇಕು ಎನ್ನುವ ನಿಯಮವೂ ಇಲ್ಲ. ಕಿರಿಯರಿಂದ ಹಿಡಿದು ವೃದ್ಧರವರೆಗೂ ವಯೋಮಾನಕ್ಕೆ ತಕ್ಕಂತೆ ಯೋಗಾಭ್ಯಾಸ ಮಾಡಬಹುದು.

ಜನಸಂಖ್ಯೆಯೇ ದೊಡ್ಡ ಆಸ್ತಿಯಾಗಿರುವ ಭಾರತದಲ್ಲಿ ಎಲ್ಲರೂ ಯೋಗಾಭ್ಯಾಸವನ್ನು ರೂಢಿಸಿಕೊಂಡು ಆರೋಗ್ಯವಂತರಾಗಬೇಕು. ಆಧ್ಯಾಾತ್ಮಿಕವಾದ ಅಭ್ಯಾಾಸಕ್ಕೆ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿರುವುದೇ ಯೋಗ. ಆದ್ದರಿಂದ ನಿರಂತರವಾಗಿ ಯೋಗಾಭ್ಯಾಸದಲ್ಲಿ ತೊಡಗಿದರೇ ಮನುಷ್ಯನ ವ್ಯಕ್ತಿತ್ವ  ಪರಿಪೂರ್ಣವಾಗಿ ಹೊರಹೊಮ್ಮುತ್ತದೆ. ಇಚ್ಛಾಶಕ್ತಿಯನ್ನು ಬೆಳೆಸಿಕೊಂಡು ಶಿಸ್ತಿನಿಂದ ಯೋಗಾಭ್ಯಾಾಸ ಮಾಡಿದರೇ ಉತ್ತಮ ಆರೋಗ್ಯಕರ ಸಮಾಜ ನಿರ್ಮಿಸಬಹುದು ಎಂದು ಹೇಳಿದ್ದಾರೆ.

Share.
Exit mobile version