ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನದಂದು ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಗವು ನಿಜವಾಗಿಯೂ ಜಗತ್ತನ್ನು ಹೇಗೆ ಒಂದುಗೂಡಿಸಿದೆ ಎಂಬುದನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು
ಯೋಗದ ಮಹತ್ವವನ್ನು ಜಗತ್ತು ಗುರುತಿಸುತ್ತಿರುವುದರಿಂದ ಯೋಗ ಇಡೀ ಜಗತ್ತನ್ನು ಸಂಪರ್ಕಿಸಿದೆ ಎಂದರು.
ಯೋಗ ಕೇವಲ ವ್ಯಾಯಾಮವಲ್ಲ. ಇದು ಒಂದು ಜೀವನ ವಿಧಾನ” ಎಂದು ಪ್ರಧಾನಿ ಹೇಳಿದರು. ಈ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದ ಅವರು, “ಇಂದು ಇಡೀ ಜಗತ್ತು ಯೋಗ ಮಾಡುತ್ತಿದೆ. ಯೋಗ ಎಂದರೆ ಸೇರಿಸುವುದು ಎಂದರ್ಥ, ಮತ್ತು ಯೋಗವು ಇಡೀ ಜಗತ್ತನ್ನು ಹೇಗೆ ಸಂಪರ್ಕಿಸಿದೆ ಎಂಬುದನ್ನು ನೋಡುವುದು ಅಪಾರ ಸಂತೋಷವಾಗಿದೆ” ಎಂದರು.