ಬೆಂಗಳೂರು : ಅಪ್ರಾಪ್ತೇ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪುಕ್ಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಘಟನೆ ಸ್ಥಳಕ್ಕೆ ತನಿಕಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆ ಸಾಕ್ಷಿಗಳ ಸಂಗ್ರಹ ಮಾಡಲಾಗುತ್ತಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಗೈಡ್ ಲೈನ್ಸ್ ಹಾಗೂ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುತ್ತಿದೆ. ಕೃತ್ಯ ನಡೆದ ಸ್ಥಳ ಎಂದು ಆರೋಪಿಸಲಾದ ಕಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಸ್ಥಳದಲ್ಲಿ ಸಿಗಬಹುದಾದ ಸಾಕ್ಷಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ.
ಈ ನಡುವೆ CID ತನಿಖೆಗಾಗಿ, ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಿದೆ ಎನ್ನಲಾಗಿದ್ದು, ಈ ಬಗ್ಗೆ ಇಂದು ಸಂಜೆಯೊಳಗೆ ಆದೇಶವನ್ನು ಹೊರಡಿಸಲಲಾಗುವುದು ಎನ್ನಲಾಗಿದೆ.
ಪೋಕ್ಸೋ’ ಕೇಸ್ ದಾಖಲು ವಿಚಾರ : ಕಾನೂನು ರೀತಿಯಲ್ಲಿ ಎಲ್ಲವನ್ನು ಎದುರಿಸೋಣ ಎಂದ ಯಡಿಯೂರಪ್ಪ
ಬೆಂಗಳೂರು : ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ FIR ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮಾತನಾಡಿದ್ದು, ನನ್ನ ಮೇಲೆ ದಾಖಲಾಗಿರುವ ಕುರಿತಂತೆ ಕಾನೂನು ರೀತಿಯಾಗಿ ಎಲ್ಲವನ್ನು ಎದುರಿಸುತ್ತೇನೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ತಿಂಗಳು ಹಿಂದೆ ತಾಯಿ ಮಗಳು ಅನೇಕ ಸರಿ ಬಂದು ಹೋಗುತ್ತಿದ್ದರು ನನ್ ಹತ್ರ ಸೇರಿಸಲಿಲ್ಲ. ನನ್ನ ಬಳಿ ಬಂದು ಕಣ್ಣೀರು ಹಾಕಿದ್ದಾರೆ ಅಂತ ಒಳಗಡೆ ಕೆರೆಸಿಕೊಂಡು ಕುಳಿತುಕೊಂಡು ಕೇಳಿದಾಗ ತಾಯಿ ಮಗಳು ಇಬ್ಬರು ಸಮಸ್ಯೆ ಕೇಳಿದ್ದೇನೆ. ತುಂಬಾ ಅನ್ಯಾಯ ಆಗಿದೆ ಮತ್ತೊಂದು ಮಗದೊಂದು ಅಂತ ಹೇಳಿದರು. ನಾನು ಪೊಲೀಸ್ ಕಮಿಷನರ್ ಗೆ ಕಾಲ್ ಮಾಡಿ ಇವರಿಗೆ ಅನ್ಯಾಯ ಆಗಿದೆ ನ್ಯಾಯ ಕೊಡಿಸಿ ಎಂದು ದಯಾನಂದಗೆ ಕರೆ ಮಾಡಿ ಅವರತ್ರ ಕಳಿಸಿಕೊಟ್ಟಿದ್ದೇವೆ ಅದಾದ ಮೇಲೆ ನನ್ನ ಮೇಲೆ ಏನೇನೋ ಮಾತಾಡೋಕೆ ಶುರು ಮಾಡಿದರು ಎಂದರು.