ಬೆಂಗಳೂರು: ಇಂದು 70ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿತ್ತು. ಇಂತಹ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ರಾಕಿಂಗ್ ಸ್ಟಾರ್ ಯಶ್ ಅವರು, ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಂತ ಎಲ್ಲರಿಗೂ ಹೃದಯ ಪೂರ್ವಕವಾದಂತ ಶುಭಾಶಯಗಳು. ವಿಶೇಷವಾಗಿ ಕನ್ನಡದ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಕಾಂತಾರ ಚಿತ್ರದ ಇಡೀ ಚಿತ್ರತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಹೀಗಿದೆ ನಟ ಯಶ್ ಎಕ್ಸ್ ಪೋಸ್ಟ್
ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
‘ಕಾಂತಾರಾ’ ಮತ್ತು ‘ಕೆಜಿಎಫ್ 2’ ಚಿತ್ರಗಳಿಗೆ ಸೂಕ್ತ ಮನ್ನಣೆ ನೀಡಿದ ನಮ್ಮ ರಿಷಬ್ ಶೆಟ್ಟಿ, ವಿ.ಕಿರಗಂದೂರು, ಪ್ರಶಾಂತ್ ನೀಲ್ ಮತ್ತು ಇಡೀ ಹೊಂಬಾಳೆ ಚಿತ್ರತಂಡಕ್ಕೆ ವಿಶೇಷ ಅಭಿನಂದನೆಗಳು. ಇಲ್ಲಿ ಇನ್ನೂ ಅನೇಕ ಎತ್ತರಗಳಿವೆ. ಇದು ನಿಜವಾಗಿಯೂ ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗದ ಹೊಳೆಯುವ ಕ್ಷಣ ಎಂದು ಸಂತಸ ಹಂಚಿಕೊಂಡಿದ್ದಾರೆ.
Heartiest congratulations to all the winners of the National Awards.
A special shoutout to our very own @shetty_rishab , @VKiragandur , Prashanth Neel and the entire @hombalefilms team for the well-deserved recognition for Kantara and KGF 2. Here's to many more heights.
This is…
— Yash (@TheNameIsYash) August 16, 2024
ಮಲಯಾಳಂನ ‘ಆಟ್ಟಂ’ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ‘ರಾಷ್ಟ್ರೀಯ ಪ್ರಶಸ್ತಿ’ ಗೆಲುವು | Malayalam Movie Aattam