ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಈಗಾಗಲೇ ವಿವಿಧ ಸಮುದಾಯಗಳು ಬೆಂಬಲ ಘೋಷಿಸಿದ್ದಾವೆ. ಈ ಬೆನ್ನಲ್ಲೇ ಯಾದವ, ಗಾಣಿಗ ಸಮುದಾಯದವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಬೆಂಬಲ ಘೋಷಿಸಿದ್ದಾರೆ.
ಅಖಿಲ ಭಾರತ ಯಾದವ ಸಂಘಟನೆ, ‘ಯಾದವ ಸಮುದಾಯ’ ಬೆಂಬಲ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಅವರಿಗೆ ಅಖಿಲ ಭಾರತ ಯಾದವ ಸಂಘಟನೆ ಮತ್ತು ಕರ್ನಾಟಕ ರಾಜ್ಯ ಯಾದವ ಸಮುದಾಯದ ಬೆಂಬಲ ಘೋಷಣೆ ಮಾಡಿದೆ.
ದಿನಾಂಕ :20-4- 2024 ರಂದು ನಡೆದ ಸಭೆಯಲ್ಲಿ ವಾಸುದೇವಲು ಯಾದವ್, ಉಪಾಧ್ಯಕ್ಷರು, ಅಖಿಲ ಭಾರತ ಯಾದವ ಮಹಾಸಭಾ, ಡಿ.ಟಿ ಶ್ರೀನಿವಾಸ್, ಅಧ್ಯಕ್ಷರು ಕರ್ನಾಟಕ ರಾಜ್ಯ ಯಾದವ ಸಂಘ, ನಾಗರಾಜ ಯಾದವ್, ಎಂ.ಎಲ್.ಸಿ, ಲಕ್ಷ್ಮಿಪತಿ, ಮಾಜಿ ಅಧ್ಯಕ್ಷರು ಕರ್ನಾಟಕ ಯಾದವ ಸಂಘ, ಮಾಜಿ ಕಾರ್ಪೋರೇಟರ್ ಗಳಾದ
ಜಯರಾಂ, ವಿಜಯನಗರ, ಶ್ರೀನಿವಾಸ, ಅಗ್ರಹಾ ದಾಸರಹಳ್ಳಿ, ಕೋಕಿಲ ರಾಮಕೃಷ್ಣ, ಕೋರಮಂಗಲ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳ ಯಾದವ/ಗೊಲ್ಲ ಸಮುದಾಯದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರಿಗೆ ನಮ್ಮ ಸಮುದಾಯವು ಒಮ್ಮತದಿಂದ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಘೋಷಿಸಿದರು. ಸದರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾದವ ಸಮುದಾಯದ ಸುಮಾರು 50 ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಹೆಚ್‌ಎಂ. ರೇವಣ್ಣ ಹಾಗೂ ಮಾಜಿ ಲೋಕಸಭಾ ಸದಸ್ಯರಾದ ವಿಎಲ್ ಉಗ್ರಪ್ಪ ಭಾಗವಹಿಸಿದ್ದರು.
‘ಗಾಣಿಗ ಸಮುದಾಯ’ ಬೆಂಬಲ ಘೋಷಣೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯರೆಡ್ಡಿ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಗಾಣಿಗ ಸಮುದಾಯವು ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.
ಬೆಂಗಳೂರಿನ ಜಯನಗರದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರುವ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಗಾಣಿಗ ಸಮುದಾಯದ ಬಂಧುಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ ಅವರು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ವಿಧಾನಪರಿಷತ್ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ರವರು, ಎಸ್ ಎಲ್ ಎನ್ ಧರ್ಮ ಸಂಸ್ಥೆಯ ಅಧ್ಯಕ್ಷರಾದ ಎಸ್ ಸುರೇಶ್ ರವರು ಕೆಪಿಸಿಸಿ ಸದಸ್ಯರಾದ ಡಿವಿ ಲಕ್ಷ್ಮಿ ರವರು ಕಾಂಗ್ರೆಸ್ ಮುಖಂಡರಾದ ಎಂ ಎಸ್ ಮುನಿರಾಜು ಅವರು ಪರಿಸರ ವೇಣುಗೋಪಾಲ್ ರವರು ಹಾಗೂ ಅನೇಕ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಈ ಸಭೆಯಲ್ಲಿ ನೆರೆದಿದ್ದ ಗಾಣಿಗ ಸಮುದಾಯದ ಬಂಧುಗಳು ಒಕ್ಕೊರಲಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸೌಮ್ಯ ರೆಡ್ಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.