ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ. ಆದರೇವ ಅವರು ಬಾಲ್ಯದಲ್ಲಿ ಕಡು ಕಷ್ಟ ಅನುಭವಿಸಿದ್ದರು. ತಮ್ಮ ಒಪ್ಪೊತ್ತಿನ ಊಟ, ಶಿಕ್ಷಣಕ್ಕಾಗಿ ತಿಂಗಳಿಗೆ 5 ರೂಪಾಯಿ ಸಂಬಳಕ್ಕೆ ಸಿನಿಮಾ ಟಾಕೀಸ್ ನಲ್ಲಿ ಗೇಟ್ ಕೀಪರ್ ಆಗಿಯೂ ಕೆಲಸ ಮಾಡಿದ್ದರು.
ಸಾಹಿತಿ ಎಸ್ ಎಲ್ ಭೈರಪ್ಪ ಅವರು ಬಾಲ್ಯದಲ್ಲೇ ಮಾರಕ ಪ್ಲೇಗ್ ರೋಗಕ್ಕೆ ಅಣ್ಣ-ತಂಗಿ, ಅಕ್ಕ, ತಾಯಿ, ತಮ್ಮನನ್ನು ಕಳೆದುಕೊಂಡರು. ಇದು ಅವರ ಬದುಕಿಗೆ ಬಹುದೊಡ್ಡ ಆಘಾತವನ್ನೇ ನೀಡಿತು. ಆ ಸಂದರ್ಭದಲ್ಲಿ ಅಕ್ಷರಶಃ ನಲುಗಿ ಹೋಗಿದ್ದರು. ಅಲ್ಲದೇ ಬೀದಿಗೆ ಕೂಡ ಬಿದ್ದಿದ್ದರು. ಹೀಗಾಗಿ ತಮ್ಮ ಆರಂಭದ ಶಿಕ್ಷಣವನ್ನು ಸೋದರ ಮಾವನ ಆಶ್ರಯದಲ್ಲಿ ಕಲಿತರು.
ಸೋದರ ಮಾವನ ಆಶ್ರಯದಿಂದ ಪ್ರಾಥಮಿಕ ಶಾಲಾ ಶಿಕ್ಷಣ ಆರಂಭಿಸಿದಂತ ಅವರು, ಆ ಬಳಿಕ ನುಗ್ಗೆಹಳ್ಳಿಗೆ ಬಂದು ಸ್ವಾಮಿ ಮೇಷ್ಟ್ರು ಮತ್ತು ಶ್ರೀನಿವಾಸ ಅಯ್ಯಂಗರ್ ಅವರಿಂದ ಶಿಕ್ಷಣ ಮುಂದುವರೆಸುವಂತೆ ಆಯ್ತು.
ಇದರ ಮಧ್ಯೆ ಸ್ವಾಮಿ ಮೇಷ್ಟ್ರು ಗೊರೂರಿಗೆ ವರ್ಗಾವಣೆಯಾದಾಗ ವಿಧಿಯಿಲ್ಲದೇ ಎಸ್ ಎಲ್ ಭೈರಪ್ಪ ಅವರು ಚನ್ನರಾಯಪಟ್ಟಣಕ್ಕೆ ಹಿಂದಿರುಗಿ ಬರುವಂತೆ ಆಯ್ತು. ಆಗ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿತ್ತು. ಊಟ, ಶಿಕ್ಷಣಕ್ಕಾಗಿ ಎಲ್ಲೆಲ್ಲೂ ಅಲೆದರೂ ನೆಲೆ ಸಿಗದಂತ ಪರಿಸ್ಥಿತಿಯನ್ನು ಎದುರಿಸಿ, ಬದುಕಿಗಾಗಿ ಹೋರಾಟ ನಡೆಸಿದವರು ಎಸ್ ಎಲ್ ಭೈರಪ್ಪ.
ಚನ್ನರಾಯಪಟ್ಟಣಕ್ಕೆ ಬಂದಂತ ಎಸ್ ಎಲ್ ಭೈರಪ್ಪ ಅವರು ನಿತ್ಯ ಖರ್ಚಿಗಾಗಿ ತಿಂಗಳಿಗೆ 5 ರೂಪಾಯಿ ಸಂಬಂಳದ ಮೇಲೆ ಸಿನಿಮಾ ಟಾಕೀಸ್ ಗೇಟ್ ಕೀಪರ್ ಆಗಿಯೂ ಕಾರ್ಯ ನಿರ್ವಹಿಸಿದರು. ಹಾಸನ, ಮೈಸೂರು, ಮುಂಬೈಗೆ ಜೀವನ ನಿರ್ವಹಣೆಗಾಗಿ ಅಲೆದಂತ ಭೈರಪ್ಪನವರು, ಮುಂಬೈನಲ್ಲಿ ರೈಲ್ವೆ ಪೋರ್ಟರ್ ಆಗಿಯೂ ಕೆಲಸ ಮಾಡಿದ್ದರು.
ಮದ್ದೂರಿನ ಹುಳಗನಹಳ್ಳಿಯ ಕಲ್ಯಾಣಿಗೆ ಜೀವ ಕಳೆ ನೀಡಿದ ನರೇಗಾ, ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್
ಸಾಗರದಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ