ಶಿವಮೊಗ್ಗ: ಜನವರಿ.5ರಂದು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲೇ ಕನ್ನಡದ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕವಿ ನಾ.ಡಿಸೋಜ ನಿಧನರಾಗಿದ್ದರು. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್ ಗೌರಗಳೊಂದಿಗೆ ಇಂದು ನೆರವೇರಿಸಲಾಯಿತು. ಆ ಮೂಲಕ ಮಲೆನಾಡಿನ ನಾಡಿ ಮಿಡಿತ ಮಣ್ಣಲ್ಲಿ ಮಣ್ಣಾಗುವ ಮೂಲಕ ನೆನಪಾಗಿ ಉಳಿಯುವಂತೆ ಆಗಿದೆ.
ಜನವರಿ.5ರಂದು ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ನಾ.ಡಿಸೋಜ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಅವರ ಫಾರ್ಥೀವ ಶರೀರವನ್ನು ನಿನ್ನೆ ಹುಟ್ಟೂರು ಸಾಗರಕ್ಕೆ ತರಲಾಗಿತ್ತು. ಅವರ ನಿವಾಸದಲ್ಲಿ, ಸಾಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.
ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆದೆ ಹಿರಿಯ ಸಾಹಿತಿ ನಾ.ಡಿಸೋಜ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಸಾರ್ವಜನಿಕರು ಪಡೆದರು. ನಗರಸಭೆ ಆವರಣದಿಂದ ಕ್ಯಾಥೋಲಿಕ್ ಸೆಂಟ್ ಜೋಸೆಫ್ ಚರ್ಚ್ ಗೆ ಕೊಂಡೊಯ್ಯಲಾಯಿತು. ಅಲ್ಲಿ ಕ್ರೈಸ್ತ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಆ ಮೂಲಕ ಮಲೆನಾಡಿನ ನಾಡಿ ಮಿಡಿತ ಮಣ್ಣಲ್ಲಿ ಮಣ್ಣಾದರು.
ವರದಿ: ವಸಂತ ಬಿ ಈಶ್ವರಗೆರೆ
BREAKING: ನಾಳೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕರೆದಿದ್ದ ‘ಡಿನ್ನರ್ ಮೀಟಿಂಗ್’ ರದ್ದು
GOOD NEWS: ಮಂಡ್ಯದ ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಹೆಚ್ಚುವರಿ 2 ಗಂಟೆ ವಿದ್ಯುತ್ ಪೂರೈಕೆ