ಕೊಪ್ಪಳ : ವಿಶ್ವದಲ್ಲಿಯೇ ಅತ್ಯಂದ ದುಬಾರಿ ಮಾವಿನ ಹಣ್ಣು ಎಂದು ಕರೆಸಿಕೊಳ್ಳುವ ಜಪಾನ್ ಮೂಲದ ಮಿಯಾಜಾಕಿ ಮಾವಿನ ಹಣ್ಣು ಈಗ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿಯೂ ಲಭ್ಯವಿದೆ. ಪ್ರತಿ ಕೆ.ಜಿ. ಮಿಯಾಜಾಕಿ ಮಾವಿನ ಹಣ್ಣಿಗೆ 2.5 ಲಕ್ಷ ರೂ.ಗಳಿಂದ 2.7 ಲಕ್ಷ ರೂ. ಬೆಲೆಯಿದೆ.
ಕರ್ನಾಟಕದ ವಿಜಯಪುರ ಜಿಲ್ಲೆಯ ಅಷ್ಪಾಕ್ ಪಾಟೀಲ್ ಎಂಬ ಯುವಕ ಮನೆಯ ಕೈತೋಟದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಮಿಯಾಜಾಕಿ ಬೆಳೆದಿದ್ದು, ಅದನ್ನು ಕೊಪ್ಪಳದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.
ಮಿಯಾಜಾಕಿ ತಳಿ ಮಾವು ಜಗತ್ತಿನ ದುಬಾರಿ ಮಾವು ಎಂದು ಪರಿಗಣಿಸಲ್ಪಟ್ಟಿದೆ. ಈ ಮಾವಿನ ಬೆಲೆ ಒಂದು ಕಿಲೋ ಗ್ರಾಂಗೆ 2 ಲಕ್ಷ 50 ಸಾವಿರ ರೂಗಳು ಎಂದು ತಿಳಿದು ಬಂದಿದೆ. ಈ ಮಾವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಕೊಪ್ಪಳದಲ್ಲಿ ಪ್ರತಿವರ್ಷ ಮಾವಿನ ಹಣ್ಣೀನ ಸೀಜನ್ ನಲ್ಲಿ ತೋಟಗಾರಿಕೆ ಇಲಾಖೆಯವರು ಮಾವು ಮೇಳ ಏರ್ಪಡಿಸುತ್ತಾರೆ. ಈ ಹಿನ್ನಲೆಯಲ್ಲಿ ಈ ವರ್ಷದ ಮಾವು ಮೇಳ ಇಂದಿನಿಂದ ಆರಂಭಗೊಂಡಿದ್ದು ಮೇಳದಲ್ಲಿ ಜಗತ್ತಿನ ದುಬಾರಿ ಮಾವಿನ ಹಣ್ಣಾದ ಮಿಯಾಜಾಕಿಯನ್ನು ಕೊಪ್ಪಳದ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.