ಇಟಲಿಯ ಜಾನಿಕ್ ಸಿನ್ನರ್ ಈ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ 2024 ರಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ವಿಶ್ವ ನಂ.1 ಸಿನ್ನರ್ ಯುಎಸ್ ಓಪನ್ ಗೆದ್ದ ಮೊದಲ ಇಟಾಲಿಯನ್ ಪುರುಷ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ 26 ವರ್ಷದ ಟೇಲರ್ ಫ್ರಿಟ್ಜ್ ಅವರನ್ನು 6-3, 6-4, 7-5 ಸೆಟ್‌ಗಳಿಂದ ಸೋಲಿಸಿದರು. ಇಬ್ಬರ ನಡುವಿನ ಈ ಪಂದ್ಯ 2 ಗಂಟೆ 16 ನಿಮಿಷಗಳ ಕಾಲ ನಡೆಯಿತು. 23 ವರ್ಷದ ಸಿನ್ನರ್ ಒಟ್ಟಾರೆ ಯುಎಸ್ ಓಪನ್ ಗೆದ್ದ ಎರಡನೇ ಇಟಾಲಿಯನ್ ಟೆನಿಸ್ ತಾರೆ ಎನಿಸಿಕೊಂಡಿದ್ದಾರೆ. ಈ ಹಿಂದೆ ಫ್ಲಾವಿಯಾ ಪೆನ್ನೆಟ್ಟಾ ಈ ಸಾಧನೆ ಮಾಡಿದ್ದರು. ಅವರು 2015 ರಲ್ಲಿ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ರಾಬರ್ಟಾ ವಿನ್ಸಿಯನ್ನು ಸೋಲಿಸಿದರು.
WELCOME TO BROADWAY SINNEMA 🗽 pic.twitter.com/pxqICtC66J
— US Open Tennis (@usopen) September 8, 2024
ಇಟಾಲಿಯನ್ ಟೆನಿಸ್ ತಾರೆ ಜಾನಿಕ್ ಸಿನ್ನರ್ ಅವರಿಗೆ ಇದು ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಅವರು ಈ ವರ್ಷದ ಮೊದಲ ಪ್ರಶಸ್ತಿಯನ್ನು ಗೆದ್ದರು, ಅಂದರೆ ಆಸ್ಟ್ರೇಲಿಯನ್ ಓಪನ್ 2024. ಈ ಗ್ರ್ಯಾನ್‌ಸ್ಲಾಮ್‌ನ ಫೈನಲ್‌ನಲ್ಲಿ ಸಿನ್ನರ್ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು 3-6, 3-6, 6-4, 6-4, 6-3 ಸೆಟ್‌ಗಳಿಂದ ಸೋಲಿಸಿದರು.