ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯವಾಗಿದೆ. ಹೀಗಾಗಿ ನಾಡಿನಿಂದ ಕಾಡಿನತ್ತ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಹೊರಟಿದೆ.
ಕಳೆದ ಒಂದುವರೆ ತಿಂಗಳಿಂದ ಅರಮನೆ ಆವರಣದಲ್ಲಿ ಮೈಸೂರು ದಸರಾಗಾಗಿ ಗಜಪಡೆ ಬೀಡು ಬಿಟ್ಟಿತ್ತು. ಜಂಬೂಸವಾರಿ ಮೆರವಣಿಗೆಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ಗಜಪಡೆ ನಿಭಾಯಿಸಿತು.
ಜಂಬೂಸವಾರಿ ಮೆರವಣಿಗೆ ಮುಗಿದ ಎರಡು ದಿನಗಳ ಬಳಿಕ ಸ್ವಸ್ಥಾನದತ್ತ ಗಜಪಡೆ ಹೊರಟಿದೆ. ಅರಮನೆ ಅಂಗಳದಲ್ಲಿ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂನ 14 ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಕೆ ಮಾಡಲಾಯಿತು.
ಅರ್ಚಕ ಪ್ರಹ್ಲಾದ್ ರಾವ್ ರಿಂದ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆನೆಗಳಿಗೆ ಪ್ರಿಯವಾದ ಬೆಲ್ಲ, ಕಬ್ಬು, ತೆಂಗು, ಬಾಳೆಹಣ್ಣು ನೀಡಿ ಸತ್ಕಾರ ಮಾಡಲಾಯಿತು. ಅರಮನೆ ಅಂಗಳದಲ್ಲಿ ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಕೆ ಮಾಡಲಾಯಿತು. ಪೂಜೆಯ ಬಳಿಕ ಲಾರಿಗಳ ಮೂಲಕ ಸ್ವಸ್ಥಾನದತ್ತ ಕ್ಯಾಪ್ಟನ್ ಅಭಿಮನ್ಯು ಟೀಂ ತೆರಳುತ್ತಿದೆ.
ಲಾರಿಯನ್ನೇರಲು ಕೊಂಚ ಪ್ರತಿರೋಧವನ್ನು ಏಕಲವ್ಯ ತೋರಿದನು. ಆದರೇ ಮಾವುತರು ಕಾವಾಡಿಗರು ಏಕಲವ್ಯನನ್ನು ಸಂತೈಸಿ ಲಾರಿಯನ್ನೇರಿಸುವಲ್ಲಿ ಯಶಸ್ವಿಯಾಯಿತು. ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ವಿವಿಧ ಆನೆ ಶಿಬಿರಗಳತ್ತ ದಸರಾ ಗಜಪಡೆ ಸಾಗುತ್ತಿದೆ.
ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾದ ದಸರಾ ಆನೆಗಳ ಬೀಳ್ಕೊಡುಗೆ
ಅಭಿಮನ್ಯು ನೇತೃತ್ವದ ಗಜಪಡೆಯನ್ನು ಬೀಳ್ಕೊಡಲು ಜನರು ಕಿಕ್ಕಿರಿದು ಸೇರಿದ್ದರು. ಸೊಂಡಿಲನ್ನೆತ್ತಿ ಸನ್ನೆ ಮಾಡುವ ಮೂಲಕ ನಾಡಿನಿಂದ ಕಾಡಿನತ್ತ ಹೊರಟಿತು. ಆನೆಗಳ ಜೊತೆ ಮಾವುತರು ಕಾವಾಡಿಗರು ಹಾಗು ಕುಟುಂಬ ವರ್ಗ ಆನೆ ಶಿಬಿರಗಳತ್ತ ಪಯಣ ಬೆಳೆಸಿತು.
BREAKING: ‘ಬೌದ್ಧ ಧರ್ಮ’ ಸ್ವೀಕರಿಸುವುದಾಗಿ ‘ಸಚಿವ ಮಹದೇವಪ್ಪ’ ಘೋಷಣೆ | HC Mahadevappa
ಗೃಹಲಕ್ಷ್ಮಿ’ ಫಲಾನುಭವಿಗಳ ಖಾತೆಗೆ 1 ತಿಂಗಳ ಹಣ ಜಮೆಯ ವಿಚಾರ : ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
BREAKING ; ದೆಹಲಿ ಸಿಎಂ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ‘ಪ್ರಧಾನಿ ಮೋದಿ’ ಭೇಟಿಯಾದ ‘ಅತಿಶಿ’