ಬೆಂಗಳೂರು : ನೋಂದಾಯಿತ ಫಲಾನುಭವಿಯು ಕಟ್ಟಡ ಕಾಮಗಾರಿಗಳಲ್ಲಿ ಕೆಲಸ ಮಾಡುವ ವೇಳೆ ಉಂಟಾದ ಅಪಘಾತದಿಂದ ಅಥವಾ ನಿರ್ದಿಷ್ಟ ಪಡಿಸಿದ ಖಾಯಿಲೆಗಳಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಂಡಳಿಯು ಮಾಸಿಕ ದುರ್ಬಲತೆ ಪಿಂಚಣಿಯನ್ನು ನೀಡುತ್ತದೆ. ಫಲಾನುಭವಿಯು ಅಗತ್ಯ ದಾಖಲೆಗಳೊಂದಿಗೆ ಆನ್ ನಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ದುರ್ಬಲತೆ ಪಿಂಚಣಿ ಸೌಲಭ್ಯ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು
• ಮ೦ಡಳಿಯಲ್ಲಿ ನೀಡಿರುವ ಗುರುತಿನ ಚೀಟಿ
• ದುರ್ಬಲತೆಯ ಛಾಯಾಚಿತ್ರ
• ಬ್ಯಾಂಕ್ ಪಾಸ್ ಬುಕ್ ಪ್ರತಿ
• ಎಫ್ ಐ ಆರ್ ಪ್ರತಿ
• ವೈದ್ಯಕೀಯ ವರದಿ
• ಆಸ್ಪತ್ರೆಯ ಬಿಲ್ ಗಳು
• ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪಡೆದ ದುರ್ಬಲತೆ ಪ್ರಮಾಣ ಪತ್ರ
• ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ
• ಜೀವಿತ ಪ್ರಮಾಣ ಪತ್ರ
ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ದುರ್ಬಲತೆ ಗುರುತಿನ ಚೀಟಿ ಪಡೆದ ನಂತರದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು
ಕಾರ್ಮಿಕ ಸಹಾಯವಾಣಿ 155214