ನವದೆಹಲಿ : ಪ್ರಯಾಗ್ ರಾಜ್’ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಗುರಿಯಾಗಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 100 ಜನ್ಮಗಳ ನಂತರವೂ ಅಮಿತ್ ಶಾ ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಹೇಳಿದರು.
ಮಹಾ ಕುಂಭ ಆಚರಣೆಯಲ್ಲಿ ಭಾಗವಹಿಸಲು ಅಮಿತ್ ಶಾ ಸೋಮವಾರ ಪ್ರಯಾಗ್ ರಾಜ್ ಹೋಗಿದ್ದು, ತ್ರಿವೇಣಿ ಸಂಗಮದಲ್ಲಿ ಹಲವಾರು ಹಿಂದೂ ಸಂತರು ಮತ್ತು ಸಾಧುಗಳೊಂದಿಗೆ ಪವಿತ್ರ ಸ್ನಾನ ಮಾಡಿದರು ಮತ್ತು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
“ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಒಟ್ಟಿಗೆ ಅನೇಕ ಪಾಪಗಳನ್ನು ಮಾಡಿದ್ದಾರೆ, ಅವರು 100 ಜನ್ಮವಾದ್ರು ಸ್ವರ್ಗಕ್ಕೆ ಹೋಗಲು ಸಾಧ್ಯವಾಗುವುದಿಲ್ಲ” ಎಂದು ಖರ್ಗೆ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಸಂಗಮದಲ್ಲಿ ಪವಿತ್ರ ಸ್ನಾನದಲ್ಲಿ ಬಿಜೆಪಿ ನಾಯಕರು ಭಾಗವಹಿಸುತ್ತಿರುವ ಬಗ್ಗೆ ತಮ್ಮ ಟೀಕೆಯನ್ನ ಮತ್ತಷ್ಟು ತೀವ್ರಗೊಳಿಸಿದ ಖರ್ಗೆ, “ಬಿಜೆಪಿ ನಾಯಕರು ಸ್ಪರ್ಧೆಯಲ್ಲಿದ್ದಾರೆ, ಪವಿತ್ರ ಸ್ನಾನವನ್ನು ಓಟದ ಭಾಗವಾಗಿ ತೆಗೆದುಕೊಳ್ಳುತ್ತಾರೆ ” ಎಂದು ಹೇಳಿದರು.
“ಅರೇ ಭಾಯ್, ಗಂಗಾ ಮೇ ದುಬ್ಕಿ ಲೆನೆ ಸೆ ಗರೀಬಿ ಡರ್ ಹೋತಿ ಹೈ ಕ್ಯಾ? (ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ? ಸ್ನಾನ ಮಾಡುವುದರಿಂದ ನಿಮಗೆ ಆಹಾರ ಸಿಗುತ್ತದೆಯೇ” ಎಂದು ಅವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಸಭಿಕರನ್ನು ಕೇಳಿದರು.
BREAKING : ಜೋಹೋ ಕಾರ್ಪೊರೇಷನ್ ‘CEO’ ಹುದ್ದೆಗೆ ‘ಶ್ರೀಧರ್ ವೆಂಬು’ ರಾಜೀನಾಮೆ
Good News : ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಚಿನ್ನದ ಬೆಲೆ ‘300 ರೂಪಾಯಿ’ ಇಳಿಕೆ |Gold Rate