ಬೆಂಗಳೂರು: ನಗರದಲ್ಲಿ ರೇವ್ ಪಾರ್ಟಿ ಮೂಲಕ ಬೆಂಗಳೂರು ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈಗ ಬ್ರದರ್ ಎನ್ನುವ ಕಾರಣಕ್ಕೆ ಸಿದ್ಧರಾಮಯ್ಯ ಸರ್ಕಾರವು ಈ ಪೆಡ್ಲರ್ ಗೂ ಅಮಾಯಕ ಪಟ್ಟ ಕಟ್ಟಿದರೇ ಅಚ್ಚರಿ ಇಲ್ಲ ಅಂತ ಕರ್ನಾಟಕ ಬಿಜೆಪಿ ವಾಗ್ಧಾಳಿ ನಡೆಸಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಬಿಜೆಪಿ, ಅಧಿಕಾರದಲ್ಲಿರುವ ಕರ್ನಾಟಕ ಕಾಂಗ್ರೆಸ್ ರಾಜಧಾನಿ ಬೆಂಗಳೂರನ್ನು ಆ ದಿನಗಳ ಗತ ವೈಭವಕ್ಕೆ ಕರೆದುಕೊಂಡು ಹೋಗಲು ಗೂಂಡಾಗಿರಿ, ದಾದಾಗಿರಿಗೆ ಮುನ್ನುಡಿ ಬರೆದು ರೇವ್ ಪಾರ್ಟಿಗೆ ಅವಕಾಶ ನೀಡಿದೆ ಅಂತ ಗುಡುಗಿದೆ.
ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ರೇವ್ ಪಾರ್ಟಿ, ದೇಶದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿತ್ತು. ಇದೀಗ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡಿದ ಡಿಜೆ ಹಳ್ಳಿಯ ಶರೀಫ್ ಸಿಕ್ಕಿ ಬಿದ್ದಿದ್ದಾನೆ ಎಂದು ಹೇಳಿದೆ.
ಬ್ರದರ್ ಎನ್ನುವ ಕಾರಣಕ್ಕೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಪೆಡ್ಲರ್‌ಗೂ ಅಮಾಯಕ ಪಟ್ಟ ಕಟ್ಟಿದರೆ ಅಚ್ಚರಿ ಇಲ್ಲ ಎಂಬುದಾಗಿ ಹೇಳಿದೆ.
ಅಧಿಕಾರದಲ್ಲಿರುವ @INCKarnataka ರಾಜಧಾನಿ ಬೆಂಗಳೂರನ್ನು ಆ ದಿನಗಳ ಗತ ವೈಭವಕ್ಕೆ ಕರೆದುಕೊಂಡು ಹೋಗಲು ಗೂಂಡಾಗಿರಿ, ದಾದಾಗಿರಿಗೆ ಮುನ್ನುಡಿ ಬರೆದು ರೇವ್ ಪಾರ್ಟಿಗೆ ಅವಕಾಶ ನೀಡಿದೆ.
ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ರೇವ್ ಪಾರ್ಟಿ, ದೇಶದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿತ್ತು. ಇದೀಗ ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡಿದ ಡಿಜೆ ಹಳ್ಳಿಯ… pic.twitter.com/C5ELy04kYk
— BJP Karnataka (@BJP4Karnataka) June 3, 2024
ವಿಧಾನ ಪರಿಷತ್ ಚುನಾವಣೆ: ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಕೆ ಮಂಜುನಾಥ್ ಕುಮಾರ್ ಮತದಾನ
ಕಾರ್ಮಿಕರೇ ಗಮನಿಸಿ : ರಾಜ್ಯ ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ʻಸೌಲಭ್ಯʼಗಳು!