ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಉದ್ಯೋಗಿನಿ, ಧನಶ್ರೀ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ.
ಪ್ರಸಕ್ತ (2024-25) ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಉದ್ಯೋಗಿನಿ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆಗಳಿಗೆ ಸೇವಾ ಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಿದ್ದು, ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 21 ರ ಸಂಜೆ 5.30 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗಿನಿ ಯೋಜನೆಯ ಸೌಲಭ್ಯಗಳು
ಗರಿಷ್ಠ ಸಾಲದ ಮೊತ್ತ Rs. 3,00,000 ಈ ಯೋಜನೆ ಅಡಿ ಬ್ಯಾಂಕುಗಳಿಂದ ಪಡೆಯಬಹುದು.
30% ಅಥವಾ ಗರಿಷ್ಠ Rs 90,000 ಸಾಲದ ಮೊತ್ತವು ವಿಧವೇ ಅಥವಾ ಅಂಗವಿಕಲರಾದ ಮಹಿಳೆಯರಿಗೆ ನೀಡಲಾಗುವುದು.
50% ಅಥವಾ ಗರಿಷ್ಠ Rs 1,50,000 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳಿಗೆ ನೀಡಲಾಗುವುದು.
ಉದ್ಯೋಗಿನಿ ಯೋಜನೆಗೆ ಅರ್ಹತೆ
ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
ಮಹಿಳೆಯರ ವಯಸ್ಸು 18 ರಿಂದ 55 ಆಗಿರಬೇಕು.
ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗಗಳಿಗೆ ವಾರ್ಷಿಕ ಇನ್ಕಮ್ ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು.
ಸಾಮಾನ್ಯ ವರ್ಗದ ವಾರ್ಷಿಕ ಆದಾಯ ರೂ.1.5 ಲಕ್ಷದೊಳಗಿರಬೇಕು.
ಸಾಲ ಮಂಜೂರಾದ ನಂತರ, ಸಾಲ ಬಿಡುಗಡೆಗೆ ಮುನ್ನ ಈ ಮಹಿಳೆಯರಿಗೆ 3 ರಿಂದ 6 ದಿನಗಳ ಕಾಲ EDP ತರಬೇತಿ ನೀಡಲಾಗುತ್ತದೆ.
ಅಗತ್ಯವಿರುವ ದಾಖಲೆಗಳು
ಉದ್ಯೋಗಿನಿ ಯೋಜನೆಯಲ್ಲಿ ನೊಂದಾಯಿಸಲು ಬೇಕಾಗಿರುವ ದಾಖಲೆಗಳು ಈ ಕೆಳಗಿನಂತಿವೆ :-
ಅರ್ಜಿದಾರರ ಆಧಾರ್ ಕಾರ್ಡ್.
ಜನನ ಪ್ರಮಾಣಪತ್ರ.
ವಿಳಾಸ ಮತ್ತು ಆದಾಯದ ಪುರಾವೆ.
BPL ಕಾರ್ಡ್ ಮತ್ತು ಪಡಿತರ ಚೀಟಿ (ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿದ್ದಾರೆ).
ಜಾತಿ ಪ್ರಮಾಣಪತ್ರ, ಅನ್ವಯಿಸಿದರೆ.
ಬ್ಯಾಂಕ್ ಪಾಸ್ ಬುಕ್ ನ ಪ್ರತಿ.
ಬ್ಯಾಂಕ್/NBFC ಗೆ ಅಗತ್ಯವಿರುವ ಯಾವುದೇ ಇತರ ದಾಖಲೆ.