ಮಲಪ್ಪುರಂ : ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕನೊಬ್ಬ ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡುತ್ತಾ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ್ದು, ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪಂಚಾಯತ್ ವಾರ್ಡ್’ನ್ನ ಕೇವಲ 47 ಮತಗಳ ಅಂತರದಿಂದ ಗೆದ್ದ ಸಯೀದ್ ಅಲಿ ಮಜೀದ್ ತೆನ್ನೆಲಾ ತನ್ನ ವಿಜಯೋತ್ಸವ ಭಾಷಣದಲ್ಲಿ ನಾಲಿಗೆ ಹರಿ ಬಿಟ್ಟಿದ್ದಾನೆ.
ವಿಜಯೋತ್ಸವ ಭಾಷಣದ ಸಮಯದಲ್ಲಿ, ಮಜೀದ್ ಮಹಿಳೆಯರನ್ನ ಅವಮಾನಿಸುವಂತಹ ಹೇಳಿಕೆಗಳನ್ನ ನೀಡಿದ್ದು, ವ್ಯಾಪಕವಾಗಿ ಟೀಕಿಸಲಾಗ್ತಿದೆ. ಮದುವೆಯ ಮೂಲಕ ಕುಟುಂಬಗಳಿಗೆ ಬರುವ ಮಹಿಳೆಯರನ್ನ ಮತಗಳಿಗಾಗಿ ಅಪರಿಚಿತರ ಮುಂದೆ ತರಬಾರದು ಅಥವಾ ರಾಜಕೀಯವಾಗಿ ಸೋಲಿಸಲು ಬಳಸಬಾರದು ಎಂದು ಹೇಳಿದ್ದು, ಮಹಿಳೆಯರು ತಮ್ಮ ಗಂಡಂದಿರೊಂದಿಗೆ ಇರಲು ಅಥವಾ ಮಲಗಲು ಮಾತ್ರ ಸೀಮಿತ ಎಂದಿದ್ದಾನೆ.
ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ಹರಡಿದ್ದು, ನೆಟ್ಟಿಗರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ.
BREAKING : ಪಂಜಾಬ್’ನಲ್ಲಿ ಹಲವು ಪ್ರಮುಖ ಶಾಲೆಗಳಿಗೆ ಬಾಂಬ್ ಬೆದರಿಕೆ : ವಿದ್ಯಾರ್ಥಿಗಳಲ್ಲಿ ಭೀತಿ, ಶೋಧ ಕಾರ್ಯ
BIGG NEWS : ‘MNREGA’ ರದ್ದು, ಕೇಂದ್ರದಿಂದ ‘ಹೊಸ ಯೋಜನೆ’ ಪರಿಚಯ, ಗ್ರಾಮೀಣ ಜನರಿಗೆ 125 ದಿನಗಳ ಉದ್ಯೋಗ!








