ಬೆಂಗಳೂರು: ಅಧಿಕಾರಕ್ಕೆ ಬಂದರೆ ರಕ್ಷಣಾ ಸೇವೆಗಳ ನೇಮಕಾತಿಯ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಿ, ಪ್ರತಿ ತಿಂಗಳು ಪ್ರತಿ ಮಹಿಳೆಯ ಖಾತೆಗೆ 8,500 ರೂ.ಗಳನ್ನು ಜಮಾ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಬಿಹಾರದಲ್ಲಿ ಮಹಾಘಟಬಂಧನ್ ಅಭ್ಯರ್ಥಿಗಳ ಪರವಾಗಿ ಬ್ಯಾಕ್ ಟು ಬ್ಯಾಕ್ ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಬಿಜೆಪಿ ಬಣದ ಪರವಾಗಿ ಸ್ಪಷ್ಟ ಅಲೆ ಇರುವುದರಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಪಾದಿಸಿದರು.
ಈ ನಡುವೆ ಪ್ರತಿ ತಿಂಗಳು ಪ್ರತಿ ಮಹಿಳೆಯ ಖಾತೆಗೆ 8,500 ರೂ.ಗಳನ್ನು ಜಮಾ ಅಂತ ಕಾಂಗ್ರೆಸ್ ಹೇಳಿದ ಬೆನ್ನಲೇ ಬೆಂಗಳೂರು ಸೇರಿದಂಥೆ ನಾನಾ ಕಡೆಗಳಲ್ಲಿ ಪೋಸ್ಟ್ ಆಫೀಸ್ ಮುಂದೆ ಮಹಿಳೆಯರು ಕ್ಯೂ ನಿಂತಿರುವುದು ಕಂಡು ಬಂದಿದೆ. ಬೆಂಗಳೂರಿನ ಕೆಲವು ಪೋಸ್ಟ್ ಆಫೀಸ್ ಮುಂದೆ ನೂರಾರು ಮಹಿಳೆಯರು ಕ್ಯೂ ನಿಂತಿರುವುದು ಕಂಡು ಬಂದಿದೆ. ಈ ನಡುವೆ ಪೋಸ್ಟ್ ಆಫೀಸ್ ಅಧೀಕಾರಿಗಳು ಕ್ಯೂ ನಿಂತುಕೊಂಡಿರುವುದನ್ನು ಗಮನಿಸಿ, ಯಾರು ಕೂಡ ಗಾಳಿ ಸುದ್ದಿಗೆ ಕಿವಿಗೊಡದೇ ಸಾವಾಧಾನವಾಗಿ ಬಂದು ಅಕೌಂಟ್ ಮಾಡಿಸಲು ಬನ್ನಿ ಎನ್ನುತ್ತಿದ್ದಾರೆ. ಕಳೆದ ಹದಿನಾಲ್ಕು ದಿನದಿಂದ ಈ ರೀತಿಯ ಸನ್ನಿವೇಶ ನಿರ್ಮಾಣವಾಗಿದ್ದು, ಬೆಳ್ಳಂ ಬೆಳಗ್ಗೆ ಟೋಕನ್ ಅನ್ನು ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ.