Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದ ಖಜಾನೆಯಲ್ಲಿ ಏನೂ ಇಲ್ಲ; ಸಾಹುಕಾರನ ಧಿಮಾಕು ಸಾಲಗಾರರು ಬಂದಾಗ ಗೊತ್ತೆ- ಬೊಮ್ಮಾಯಿ

05/04/2026 5:25 PM

ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಸಂಸದ ಬಸವರಾಜ ಬೊಮ್ಮಾಯಿ

05/04/2026 5:19 PM

ಹುಡುಗಿಯರಿಗೆ ಹುಡುಗರಲ್ಲಿ ಇಷ್ಟವಾಗುವ ಆ ‘ಒಂದು’ ಗುಣ ಯಾವುದು? ಆಕರ್ಷಣೆಯ ಹಿಂದಿನ ಸೈಕಾಲಜಿ ಇಲ್ಲಿದೆ!

05/04/2026 5:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಸಂಸದ ಬಸವರಾಜ ಬೊಮ್ಮಾಯಿ
KARNATAKA

ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಸಂಸದ ಬಸವರಾಜ ಬೊಮ್ಮಾಯಿ

By kannadanewsnow0905/04/2026 5:19 PM

ಬಾಗಲಕೋಟೆ: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮನೆಯಲ್ಲಿ ಹೆಣ್ಣು ಮಗಳು ಕಾಲೇಜಿಗೆ ಹೋಗಿದ್ದರೆ ಸಂಜೆ ಮನೆಗೆ ತಡವಾಗಿ ಬಂದರೆ ಭಯವಾಗುತ್ತದೆ. ಕೆಲಸಕ್ಕೆ ಹೋದ ಹೆಣ್ಣು ಮಗಳು ಬರುತ್ತಾರೊ ಇಲ್ಲವೊ ಎನ್ನುವ ಆತಂಕದಲ್ಲಿ ತಾಯಂದಿರು ಬದುಕುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗಬೇಕೆಂದರೆ ಕರ್ನಾಟಕ ಸರ್ಕಾರ ಬದಲಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ನಗರದ ವಾರ್ಡ ನಂಬರ 28 ರ ಪ್ರಕಾಶ ಹಂಡಿ ಅವರ ಮನೆ ಹಾಗೂ ವಾರ್ಡ್ ನಂಬರ್ 29 ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆಯನ್ನು ಮಾಡಿದರು. ಹೆಣ್ಣು ಮಕ್ಕಳ ಸುರಕತೆಯಲ್ಲಿ ತಾಯಂದಿರು ಬಹಳ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ವಿಚಾರದಲಿ ಸುರಕ್ಷತೆ ಇಲ್ಲ. ಬೆಳಿಗ್ಗೆ ಟಿವಿ ನೋಡಿದರೆ ರೇಪ್, ಮರ್ಡರ್, ಲವ್ ಜಿಹಾದ್ ಹೆಚ್ಚುತ್ತಿವೆ. ದುಷ್ಕೃತ್ಯ ಮಾಡವವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅವರಿಗೆ ಯಾವುದೇ ಭಯ ಇಲ್ಲ. ಅವರನ್ನು ರಕ್ಷಣೆ ಮಾಡಲು ಕೆಲವು ಜನರಿದ್ದಾರೆ. ಬಾಗಲಕೋಟೆ ಸೇರಿದಂತೆ ಎಲ್ಲ ಕಡೆ ಡ್ರಗ್ ಸೇವನೆ ಹೆಚ್ಚಾಗಿದೆ. ಇದರಿಂದ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ಇಡೀ ಕರ್ನಾಟಕದ ಸಾಮಾಜಿಕ ವ್ಯವಸ್ಥೆಯನ್ನು ವಿಶೇಷವಾಗಿ ಹೆಣು ಮಕ್ಕಳ ಸುರಕ್ಷತೆ ಇಲ್ಲದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಸಣ್ಣ ಮಕ್ಕಳು, ಕಾಲೇಜು ವಿದ್ಯಾರ್ಥಿನಿಯರು ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳು ಸುರಕಿತವಾಗಿಲ್ಲ. ಇದರ ಜೊತೆಗೆ ಲವ್ ಜಿಹಾದ್ ಸೇರಿಕೊಂಡಿದೆ. ಅದು ಸಾಮಾಜಿಕ ಪಿಡುಗು. ಅವರಿಗೆ ಏನಾದರೂ ಕೇಳಿದರೆ ನಮ್ಮ ಸರ್ಕಾರ ಇದೆ ಅನ್ನುತ್ತಾರೆ. ಬಾಗಲಕೋಟೆ ಅಭಿವೃದ್ಧಿ ಆಗಬೇಕು. ಈ ವ್ಯವಸ್ಥೆ ಬದಲಾಗಬೇಕೆಂದರೆ ಕರ್ನಾಟಕ ಸರ್ಕಾರ ಬದಲಾಗಬೇಕು. ಅದಕ್ಕಾಗಿ ವೀರಣ್ಣ ಚರಂತಿಮಠ ಅವರನ್ನು ಆಯ್ಕೆ ಮಾಡಿದರೆ, ಈ ಸರ್ಕಾರದ ಪತನದ ಮೊದಲ ಹೆಜ್ಜೆ ಈ ಜಯವಾಗುತ್ತದೆ. ಈ ವಾರ್ಡ್‌ ನಲ್ಲಿ ಜನರಿಗೆ ಬಿಜೆಪಿಗೆ ಮತ ಹಾಕುವ ಮನಸಿದೆ. ಅವರನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಬರುವ ಕೆಲಸ ಮಾಡಬೇಕು. ಎಲ್ಲಕ್ಕಿಂತ ಪವಿತ್ರವಾದ ಕೆಲಸ ಮತದಾನ ಮಾಡುವುದು ಅದನ್ನು ಎಲ್ಲರೂ ಮಾಡಬೇಕೆಂದು ಮನವಿ ಮಾಡಿದರು.

ಪ್ರತಿಷ್ಠೆಯ ಚುನಾವಣೆ

ಈ ಚುನಾವಣೆ ಬಹಳ ಪ್ರತಿಷ್ಠೆಯಾಗಿರುವಂಥದ್ದು ಅದಕ್ಕೆ ಹಲವಾರು ಕಾರಣಗಳಿವೆ. ನಮ್ಮ ಅಭ್ಯರ್ಥಿ ಕರ್ನಾಟಕ ರಾಜ್ಯದಲ್ಲಿ ಪ್ರಾಮಾಣಿಕತೆಯ ವಿಚಾರ ತೆಗೆದುಕೊಂಡಾಗ ಬೆರಳೆಣಿಕೆಯ ಜನರನ್ನು ನಾವು ಪ್ರಾಮಣಿಕರು ಎಂದು ಹೇಳಬಹುದು. ಅದರಲ್ಲಿ ಪ್ರಮುಖರು ವೀರಣ್ಣ ಚರಂತಿಮಠ, ಶುದ್ಧ ಮನಸ್ಸು, ಶುದ್ಧ ಹಸ್ತ, ಇಷ್ಟು ದೊಡ್ಡ ಸಂಸ್ಥೆಯನ್ನು ಕಟ್ಟಿ ನಿಸ್ವಾರ್ಥ ಸೇವೆಯಿಂದ ಮಾಡಿ ಅವರು ಬೆಂಗಳೂರಿನ ವರೆಗೆ ಬೆಳೆಸಿದ್ದಾರೆ. ಅದೇ ರೀತಿ ಬಾಗಲಕೋಟೆ ಬೆಳೆಯಬೇಕು ಬಸವೆಶ್ವರ ಶಿಕ್ಷಣ ಸಂಸ್ಥೆ ಬೆಳೆದಂತೆ ಮುಳುಗಡೆಯಾಗಿರುವ ಬಾಗಲಕೋಟೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಅದಕ್ಕೆ ಬದ್ಧತೆ ಇರುವ ಜನಪ್ರತಿನಿಧಿ ಇದ್ದರೆ ಮಾತ್ರ ಸಾಧ್ಯ ವೀರಣ್ಣ ಚರಂತಿ ಮಠ ಅವರು ಶಾಸಕರಾಗಿದ್ದಾಗ ಮತ್ತು ಇಲ್ಲದಿರುವಾಗ ಏನಾಗುತ್ತದೆ ಎನ್ನುವುದನ್ನು ನೀವು ನೋಡಿದ್ದೀರಿ, ಅಭಿವೃದ್ಧಿಯ ಹಳಿ ತಪ್ಪಿ ಎರಡು ವರ್ಷ ವಿಳಂಬವಾದರೆ ವೆಚ್ಚ ಹೆಚ್ಚಾಗುತ್ತದೆ. ಆಗ ಯಾವುದೇ ಸರ್ಕಾರ ಬಂದರೂ ಮಾಡುವುದು ಕಷ್ಟವಾಗುತ್ತದೆ. ಆಗಿನ ಖರ್ಚಿನಲ್ಲಿಯೇ ಆದರೆ ಮುಗಿಯುತ್ತದೆ. ಈಗಿನ ಸರ್ಕಾರ ಹೇಗಿದೆ ಎಂದರೆ ನಮ್ಮ ಕಡೆ ಒಬ್ಬ ಸಾಹುಕಾರ ಇದ್ದ ಆತನ ಬಳಿ ಯಾರಾದರೂ ಸಾಲ ಕೇಳಲು ಬಂದರೆ ಮೊದಲು ಕೊಡ್ತೀನಿ ಎಂದು ಹೇಳುತ್ತಿದ್ದ. ಆ ಮೇಲೆ ಕೊಡಸ್ತೀನಿ ಅಂತಿದ್ದಾ. ಮತ್ತೆ ಮೂರು ತಿಂಗಳು ಬಿಟ್ಟು ಹೋದರೆ ಕೊಡುವವನನ್ನು ತೋರಿಸುತ್ತೇನೆ ಎನ್ನುತ್ತಾರೆ. ಈಗಿನ ಸರ್ಕಾರವೂ ಹಾಗೇ ಇದೆ. ಇಲ್ಲಿನ ವ್ಯಾಪಾರಸ್ಥರಿಗೆ ಮೂಗಿಗೆ ತುಪ್ಪ ಹಚ್ಚಿದ್ದಾರೆ. 200 ಎಕರೆಯಲ್ಲಿ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಹೇಳಿದರು.

ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿಗೆ ಹಣ

ನಾನು ನೀರಾವರಿ ಸಚಿವ ಇದ್ದಾಗ 200 ಎಕರೆ ಜಮೀನು ಕೊಟ್ಟಿದ್ದೆ ಅಲ್ಲಿ ತೋಟಗಾರಿಕೆ ಇಲಾಖೆ ಮಾಡಲಾಗಿದೆ. ಇವರ ಬಳಿ ಜಮೀನು ಇದ್ದರೆ ಇವರೇ ಕೊಡಬಹುದಿತ್ತು. ಬಾಗಲಕೋಟೆ ಬಹಳ ಸಂಕಷ್ಟ ಅನುಭವಿಸಿರುವ ನಗರ, ಡ್ಯಾಂನಲ್ಲಿ ಮುಗಳುಗಿರುವ ಪ್ರದೇಶದ ಜನರು ಬಹಳ ತೊಂದರೆ ಅನುಭವಿಸಿದ್ದಾರೆ. ಅಜ್ಜ ಮುತ್ತಜ್ಞ ಕಟ್ಟಿರುವ ಮನೆ, ಜಮೀನು ಎಲ್ಲವನ್ನೂ ಬಿಟ್ಟು ಬಹುರುವುದು ಕಷ್ಟ. ನಾನು ನೀರಾವರಿ ಸಚಿವ ಇದ್ದಾಗ ಸ್ಟೇಜ್ 1 ನಲ್ಲಿ 700 ಕೋಟಿ ರೂ. ಕೊಟ್ಟಿದ್ದೇವು. ನಾನು ಸಿಎಂ ಆಗಿದ್ದಾಗ ಇಲ್ಲಿನ ಜನರಿಗಾಗಿ 2300 ಕೋಟಿ ರೂ. ವೀರಣ್ಣ ಚರಂತಿ ಮಠ ತಂದಿದ್ದಾರೆ. ಈ ನಗರವನ್ನು ರಾಮಕೃಷ್ಣ ಹೆಗಡೆಯುವರು ನಿರ್ಮಾಣ ಮಾಡಿದ್ದಾರೆ. ಚಂಡಿಗಢ ನಗರವನ್ನು ನಿರ್ಮಾಣ ಮಾಡಿರುವ ಫ್ರೆಂಚ್ ನ ಆರ್ಕಿಟೆಕ್ಟ್ ಚಾಲ್ಸ್ ಕೊರಿಯಾ ಅವರು ಡಿಸೈನ್ ಮಾಡಿದ್ದಾರೆ. ಆಗ ನಮ್ಮ ತಂದೆ ಕಂದಾಯ ಸಚಿವರಿದ್ದರು. ಆ ಬುಕ್ ಇನ್ನೂ ನಮ್ಮ ಮನೆಯಲ್ಲಿದೆ. ಇದಕ್ಕೆಲ್ಲಾ ನೋಟಿಫಿಕೇಶನ್ ಮಾಡಿದವರು ನಮ್ಮ ತಂದೆ ಎಸ್. ಆರ್. ಬೊಮ್ಮಾಯಿಯವರು ಎಂದು ಹೇಳಿದರು.

ಈ ನಗರವನ್ನು ಇನ್ನಷ್ಟು ಮುಳುಗಡೆ ಮಾಡಿ ಅಂತ ಕೇಳುವವರಿದ್ದಾರೆ. ಕೆಲವರು ಮುಳುಗಡೆ ಬೇಡ ಅನ್ನುವವರಿದ್ದಾರೆ ಈ ಬಗ್ಗೆ ಇನ್ನಷ್ಟು ಪುನರ್ ಪರಿಶೀಲನೆ ಮಾಡಿ ಈ ನಗರಕ್ಕೆ ನ್ಯಾಯ ಕೊಡುವ ಯೋಗ್ಯತೆ ಇರುವುದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ, ಅವರಿಗೆ ಶಕ್ತಿ ಹಠ ಇದೆ. ಅವರಿಗೆ ಇನ್ನಷ್ಟು ಬೆಂಬಲ ಕೊಟ್ಟರೆ ಈ ಭಾಗದ ಅಭಿವೃಧಿ ಆಗುತ್ತದೆ. ಹೀಗಾಗಿ ವೀರಣ್ಣ ಚರಂತಿ ಮಠ ಅವರಿಗೆ ಓಟು ಹಾಕಿ ಹಾಕಿಸಬೇಕು ಎಂದು ಮನವಿ ಮಾಡಿದರು.

ಭ್ರಷ್ಟ ಸರ್ಕಾರ

ಈಗಿನದು ಅತ್ಯಂತ ಭ್ರಷ್ಟ ಸರ್ಕಾರ, ಸಬ್ ರೆಜಿಸ್ಟ‌ರ್ ಆಫೀಸಿಗೆ ಹೋದರೆ ಎಲ್ಲವೂ ಗೊತ್ತಾಗುತ್ತದೆ. ಎಲ್ಲದಕ್ಕೂ ದರ ನಿಗದಿ ಮಾಡಿದ್ದಾರೆ. ಇಲ್ಲಿ ರೆಜಿಸ್ಟ್ರೇಶನ್ ಆಗಬೇಕೆಂದರೆ ಬೆಂಗಳೂರಿನಲ್ಲಿ ಒಪ್ಪಿಗೆ ಕೊಟ್ಟರೆ ಮಾತ್ರ ರೆಜಿಸ್ಟ್ರೇಶನ್ ಆಗುತ್ತದೆ. ಒಂದು ದಿನದಲ್ಲಿ ಪ್ರತಿ ಸಣ್ಣ ಹಳ್ಳಿಯಲ್ಲಿ ಖರೀದಿ ಮತ್ತು ಮಾರಾಟ ಮಾಡುವುದಿದ್ದರೆ ದುಡ್ಡು ಬೆಂಗಳೂರಿಗೆ ಹೋಗುತ್ತದೆ. ಇಂತಹ ಕೆಟ್ಟ ವ್ಯವಸ್ಥೆ ಇದೆ. ಇದು ಹೋಗಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ವಾರ್ಡಿನ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಹುಡುಗಿಯರಿಗೆ ಹುಡುಗರಲ್ಲಿ ಇಷ್ಟವಾಗುವ ಆ ‘ಒಂದು’ ಗುಣ ಯಾವುದು? ಆಕರ್ಷಣೆಯ ಹಿಂದಿನ ಸೈಕಾಲಜಿ ಇಲ್ಲಿದೆ!

ಇರಾನ್-ಇಸ್ರೇಲ್ ಯುದ್ಧದ ಭೀತಿ: ಕಚ್ಚಾ ತೈಲ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ GST ವ್ಯಾಪ್ತಿಗೆ?

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದ ಖಜಾನೆಯಲ್ಲಿ ಏನೂ ಇಲ್ಲ; ಸಾಹುಕಾರನ ಧಿಮಾಕು ಸಾಲಗಾರರು ಬಂದಾಗ ಗೊತ್ತೆ- ಬೊಮ್ಮಾಯಿ

05/04/2026 5:25 PM3 Mins Read

SHOCKING : ರಾಜ್ಯದಲ್ಲಿ ಘೋರ ಕೃತ್ಯ : ತಂಗಿಯನ್ನು ಮದುವೆಯಾದ 40 ವರ್ಷದ ವರನ ತಾಯಿಗೆ, ಬೆಂಕಿ ಹಚ್ಚಿ ಕೊಂದ ಅಣ್ಣ!

05/04/2026 5:02 PM1 Min Read

ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ : ಜೂಜಾಟದ ಮೇಲೆ ದಾಳಿ, 19 ಜನರು ಅರೆಸ್ಟ್, 9 ಲಕ್ಷ ಜಪ್ತಿ!

05/04/2026 4:45 PM1 Min Read
Recent News

ರಾಜ್ಯ ಸರ್ಕಾರದ ಖಜಾನೆಯಲ್ಲಿ ಏನೂ ಇಲ್ಲ; ಸಾಹುಕಾರನ ಧಿಮಾಕು ಸಾಲಗಾರರು ಬಂದಾಗ ಗೊತ್ತೆ- ಬೊಮ್ಮಾಯಿ

05/04/2026 5:25 PM

ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಸಂಸದ ಬಸವರಾಜ ಬೊಮ್ಮಾಯಿ

05/04/2026 5:19 PM

ಹುಡುಗಿಯರಿಗೆ ಹುಡುಗರಲ್ಲಿ ಇಷ್ಟವಾಗುವ ಆ ‘ಒಂದು’ ಗುಣ ಯಾವುದು? ಆಕರ್ಷಣೆಯ ಹಿಂದಿನ ಸೈಕಾಲಜಿ ಇಲ್ಲಿದೆ!

05/04/2026 5:16 PM

SHOCKING : ರಾಜ್ಯದಲ್ಲಿ ಘೋರ ಕೃತ್ಯ : ತಂಗಿಯನ್ನು ಮದುವೆಯಾದ 40 ವರ್ಷದ ವರನ ತಾಯಿಗೆ, ಬೆಂಕಿ ಹಚ್ಚಿ ಕೊಂದ ಅಣ್ಣ!

05/04/2026 5:02 PM
State News
KARNATAKA

ರಾಜ್ಯ ಸರ್ಕಾರದ ಖಜಾನೆಯಲ್ಲಿ ಏನೂ ಇಲ್ಲ; ಸಾಹುಕಾರನ ಧಿಮಾಕು ಸಾಲಗಾರರು ಬಂದಾಗ ಗೊತ್ತೆ- ಬೊಮ್ಮಾಯಿ

By kannadanewsnow0905/04/2026 5:25 PM KARNATAKA 3 Mins Read

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಪಾಪ‌ರ್ ಸರ್ಕಾರದ ಸಾಹುಕಾರ. ರಾಜ್ಯ ಸರ್ಕಾರದ ಕಿಸೆಯಲ್ಲಿ, ಖಜಾನೆಯಲ್ಲಿ ಏನೂ ಇಲ್ಲ. ಸಾಹುಕಾರನ ಧಿಮಾಕು ಸಾಲಗಾರರು…

ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಸಂಸದ ಬಸವರಾಜ ಬೊಮ್ಮಾಯಿ

05/04/2026 5:19 PM

SHOCKING : ರಾಜ್ಯದಲ್ಲಿ ಘೋರ ಕೃತ್ಯ : ತಂಗಿಯನ್ನು ಮದುವೆಯಾದ 40 ವರ್ಷದ ವರನ ತಾಯಿಗೆ, ಬೆಂಕಿ ಹಚ್ಚಿ ಕೊಂದ ಅಣ್ಣ!

05/04/2026 5:02 PM

ಚಿಕ್ಕಬಳ್ಳಾಪುರದಲ್ಲಿ ಪೊಲೀಸರ ಬಹುದೊಡ್ಡ ಕಾರ್ಯಾಚರಣೆ : ಜೂಜಾಟದ ಮೇಲೆ ದಾಳಿ, 19 ಜನರು ಅರೆಸ್ಟ್, 9 ಲಕ್ಷ ಜಪ್ತಿ!

05/04/2026 4:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.