ಬೆಂಗಳೂರು: ಹುಬ್ಬಳ್ಳಿ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವುದು, ಮಹಿಳೆಯರ ಘನತೆಯನ್ನು ರಕ್ಷಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ ಎಂಬುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಪೊಲೀಸ್ ಬಂಧನದ ಸಮಯದಲ್ಲಿ ಮಹಿಳೆಯೊಬ್ಬರು ಅತ್ಯಂತ ಸಂಕಷ್ಟದ ಮತ್ತು ಅವಮಾನಕರ ಸ್ಥಿತಿಯಲ್ಲಿರುವ ದೃಶ್ಯಗಳು ಹೊರಬಂದಾಗ, ಒಂದು ಜವಾಬ್ದಾರಿಯುತ ಸರ್ಕಾರ ಸಂವೇದನಾಶೀಲತೆಯಿಂದ ಪಾರದರ್ಶಕವಾಗಿ ನ್ಯಾಯವನ್ನು ಒದಗಿಸುವ ಮಾಡಬೇಕಿತ್ತು. ಆದರೆ ಲಜೆಗೆಟ್ಟ ಕಾಂಗ್ರೆಸ್ ಸರ್ಕಾರ ಮಾಡಿದ್ದು, ನಿರಾಕರಣೆ ಮತ್ತು ಸಾರ್ವಜನಿಕ ಆಕ್ರೋಶವನ್ನು ಲಘುವಾಗಿ ಕಾಣುವ ಪ್ರಯತ್ನ ಎಂದು ಹೇಳಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಅದರ ಮೂಲಭೂತ ಕರ್ತವ್ಯವಾದ ನಾಗರೀಕರ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಬಗ್ಗೆ ನೆನಪಿಸುವಂತಹ ಪರಿಸ್ಥಿತಿ ಬಂದಿರುವುದು ಅತ್ಯಂತ ದುರದೃಷ್ಟಕರ.
ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ, ನ್ಯಾಯಯುತ ಮತ್ತು ಕಾಲಮಿತಿಯ ತನಿಖೆ ನಡೆಸುವಂತೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ, ಮತ್ತು ಸಂತ್ರಸ್ತೆಗೆ ಸೂಕ್ತ ಪರಿಹಾರ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗವು (NCW) ತಾಕೀತು ಮಾಡಿರುವುದು ಅತ್ಯಂತ ನ್ಯಾಯಯುತ ಮತ್ತು ಸ್ವಾಗತಾರ್ಹವಾಗಿದೆ.
ಕಾನೂನು ಜಾರಿ ಸಂಸ್ಥೆಗಳು ಕಾನೂನನ್ನು ಎತ್ತಿ ಹಿಡಿಯಲು ಇವೆಯೇ ಹೊರತು, ಅಧಿಕಾರದ ದುರುಪಯೋಗ ಅಥವಾ ಅಹಂಕಾರದ ಮೂಲಕ ಸಾರ್ವಜನಿಕ ವಿಶ್ವಾಸಕ್ಕೆ ಚ್ಯುತಿ ತರುವ ಕೆಲಸ ಮಾಡೋದಕ್ಕಾಗಿ ಅಲ್ಲ.
ಕಾಂಗ್ರೆಸ್ ಸರ್ಕಾರ ಕುಂಟು ನೆಪ, ಸಬೂಬುಗಳನ್ನು ಕೊಡುವುದು ಬಿಟ್ಟು, ತನ್ನ ವೈಫಲ್ಯದ ಜವಾಬ್ದಾರಿಯನ್ನು ಹೊರಬೇಕು. ಇಡೀ ರಾಜ್ಯವೇ ತಲೆತಗ್ಗಿಸುವ ಇಂತಹ ಘಟನೆ ಏಕೆ ಸಂಭವಿಸಿತು, ಕಾನೂನು ಮತ್ತು ನಿಯಮಗಳನ್ನು ಏಕೆ ಪಾಲಿಸಲಿಲ್ಲ ಮತ್ತು ಸಂವಿಧಾನಿಕ ಆಯೋಗವೊಂದು ಮಧ್ಯಪ್ರವೇಶಿಸುವ ಅಗತ್ಯ ಏಕೆ ಬಂತು ಎಂಬುದಕ್ಕೆ ರಾಜ್ಯ ಸರ್ಕಾರ ಕರ್ನಾಟಕದ ಜನತೆಗೆ ಉತ್ತರ ನೀಡಲೇಬೇಕು ಎಂಬುದಾಗಿ ಗುಡುಗಿದ್ದಾರೆ.
ಹುಬ್ಬಳ್ಳಿ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವುದು, ಮಹಿಳೆಯರ ಘನತೆಯನ್ನು ರಕ್ಷಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ.
ಪೊಲೀಸ್ ಬಂಧನದ ಸಮಯದಲ್ಲಿ ಮಹಿಳೆಯೊಬ್ಬರು ಅತ್ಯಂತ ಸಂಕಷ್ಟದ ಮತ್ತು ಅವಮಾನಕರ ಸ್ಥಿತಿಯಲ್ಲಿರುವ ದೃಶ್ಯಗಳು ಹೊರಬಂದಾಗ,… pic.twitter.com/9VZGkL0xwB
— R. Ashoka (@RAshokaBJP) January 8, 2026








