ಮೀರತ್: ತನ್ನ ಸೋದರಸಂಬಂಧಿಯ ‘ಹಲ್ದಿ ಸಮಾರಂಭ’ದಲ್ಲಿ ನೃತ್ಯ ಮಾಡುವಾಗ 18 ವರ್ಷದ ಯುವತಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೀರತ್ ನಲ್ಲಿ ಶನಿವಾರ ಸಂಜೆ ನಡೆದಿದೆ.
ಸಂತ್ರಸ್ತೆ ಲಿಸಾರಿ ಗೇಟ್ ನಿವಾಸಿಯಾಗಿದ್ದು, ಸಮಾರಂಭವು ನಗರದ ಅಹ್ಮದ್ ನಗರ ಪ್ರದೇಶದಲ್ಲಿ ನಡೆಯುತ್ತಿತ್ತು. ದುರಂತ ಘಟನೆಯ ವೀಡಿಯೊವನ್ನು ನಂತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವೈರಲ್ ಆಗಿರುವಂತ 30 ಸೆಕೆಂಡುಗಳ ಕ್ಲಿಪ್ನಲ್ಲಿ, 18 ವರ್ಷದ ರಿಮ್ಷಾ ಹಳದಿ ಉಡುಪನ್ನು ಧರಿಸಿ, ತನ್ನ ಸಂಬಂಧಿಕರೊಂದಿಗೆ ಬಾಲಿವುಡ್ ಹಾಡಿಗೆ ಮಾಡುತ್ತಿರುವುದನ್ನು ಕಾಣಬಹುದು.
UP : मेरठ में बहन के हल्दी प्रोग्राम में डांस कर रही रिमशा नामक युवती की मौत हुई। डॉक्टर इसे हार्ट अटैक बता रहे हैं। pic.twitter.com/FXa2cIzEh4
— Sachin Gupta (@SachinGuptaUP) April 28, 2024
ಅವಳು ಇದ್ದಕ್ಕಿದ್ದಂತೆ ತನ್ನ ಎದೆಯನ್ನು ಹಿಡ್ಕೊಳ್ಳುತ್ತಾಳೆ. ಆ ನಂತ್ರ ನೆಲದ ಮೇಲೆ ಕುಸಿದು ಬೀಳುವ ಮೊದಲು ಇನ್ನೊಬ್ಬರ ಕೈಯನ್ನು ಹಿಡಿಯಲು ಪ್ರಯತ್ನಿಸುತ್ತಾಳೆ. ಆದ್ರೆ ಆ ಬಾಲಕನ ಕೈ ಹಿಡಿದು, ಆತನನ್ನು ಎಳೆದುಕೊಂಡು ಹೃದಯಾಘಾತದಿಂದ ಕುಸಿದು ಬೀಳುವುದನ್ನು ವೀಡಿಯೋದಲ್ಲಿ ನೀವು ಕಾಣಬಹುದಾಗಿದೆ.
ಈ ಬಗ್ಗೆ ಆಕೆಯ ನೆರೆಹೊರೆಯವರಲ್ಲೊಬ್ಬರಾದ 42 ವರ್ಷದ ಮೊಹಮ್ಮದ್ ಅಹ್ಮದ್, “ರಿಮ್ಷಾ ಇತರರೊಂದಿಗೆ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮೂರ್ಛೆ ಹೋದಳು. ಕೂಡಲೇ ಅವಳನ್ನು ಹತ್ತಿರದ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಅವರು ಅವಳು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದರು. ಆಕೆಯ ಸಾವಿಗೆ ಹೃದಯಾಘಾತವೇ ಕಾರಣ ಎಂದು ಶಂಕಿಸಲಾಗಿದೆ. ಈಗ ಮದುವೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ.
ಈ ಘಟನೆಯ ಬಗ್ಗೆ ಆರಂಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. “ಯಾರಾದರೂ ದೂರು ನೀಡಿದರೆ ನಮ್ಮ ಕಡೆಯಿಂದ ಕ್ರಮ ಕೈಗೊಳ್ಳಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BREAKING: ಬೆಂಗಳೂರಲ್ಲಿ 14ನೇ ಮಹಡಿಯಿಂದ ಬಿದ್ದು ಯುವಕನಿಗೆ ಗಂಭೀರ ಗಾಯ
ಕೋವಿಡ್ ಗುಣಮುಖ ಸುಳ್ಳು ಹೇಳಿಕೆ ಮೂಲಕ ‘ಬಾಬಾ ರಾಮದೇವ್’ ರೆಡ್ ಲೈನ್ ದಾಟಿದ್ದಾರೆ : IMA ಅಧ್ಯಕ್ಷ