ಬೆಂಗಳೂರು: ನಗರದಲ್ಲಿ ಭೀಕರ ರಸ್ತೆ ಅಪಘಾತ ಉಂಟಾಗಿದೆ. ಏರ್ ಪೋರ್ಟ್ ರಸ್ತೆಯ ಕೋಗಿಲು ಕ್ರಾಸ್ ಬಳಿಯಲ್ಲಿ ಬೈಕಿನಿಂದ ಸ್ಕಿಡ್ ಆಗಿ ಬಿದ್ದಂತ ಮಹಿಳೆಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಕೋಗಿಲು ಕ್ರಾಸ್ ಬಳಿಯಲ್ಲಿ ಬೈಕ್ ನಲ್ಲಿ ಪತಿ, ಮಕ್ಕಳ ಜೊತೆಗೆ ಮಹಿಳೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಬೈಕ್ ಪಂಕ್ಚರ್ ಆಗಿ ಸ್ಕಿಡ್ ಆಗಿ ಉರುಳಿ ಬಿದ್ದಿದೆ.
ಈ ಸಂದರ್ಭದಲ್ಲಿ ಬೈಕಿನಿಂದ ಪತಿ, ಮಹಿಳೆ, ಮಗು ಕೆಳಗೆ ಬಿದ್ದಿದ್ದಾರೆ. ಬೈಕಿನ ಹಿಂದಿನಿಂದ ಬರುತ್ತಿದ್ದಂತ ಸಿಮೆಂಟ್ ಲಾರಿಯೊಂದು ಬೈಕಿನಿಂದ ಕೆಳಗೆ ಬಿದ್ದಂತ ಮಹಿಳೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS: ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಕೋರ್ಟ್ಗೆ ಶರಣಾಗುತ್ತೇನೆ: ಮಾಜಿ ಸಚಿವ ವಿನಯ ಕುಲಕರ್ಣಿ
ಕೋವಿಡ್-19 ಉಲ್ಬಣ: ಪ್ರಧಾನಿ ಮೋದಿ ಭೇಟಿ ಮಾಡುವ ಮೊದಲು ಸಚಿವರಿಗೆ RT-PCR ಪರೀಕ್ಷೆ ಕಡ್ಡಾಯ: