ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ಪ್ರಕರಣಗಳು ಮುಂದುವರೆದಿದೆ. ತಿರುವು ಪಡೆಯುತ್ತಿದ್ದಂತ ವೇಳೆಯಲ್ಲಿ ಬೈಕ್ ಗೆ ಡಿಕ್ಕಿಯಾದ ಕಾರಣಕ್ಕೆ ಮಹಿಳೆಯೊಬ್ಬರು ಚಾಲಕನ ಮೇಲೆ ಹಲ್ಲೆ ನಡೆಸಿರುವಂತ ಘಟನೆ ಸುಮ್ಮನಹಳ್ಳಿ ಬ್ರಿಡ್ಜ್ ಬಳಿಯಲ್ಲಿ ನಡೆದಿದೆ.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ನಿಂದ ಕೆ ಆರ್ ಮಾರುಕಟ್ಟೆಗೆ ಬಿಎಂಟಿಸಿ ಬಸ್ ಒಂದು ತೆರಳುತ್ತಿತ್ತು. ಸುಮ್ಮನಹಳ್ಳಿ ಬ್ರಿಡ್ಜ್ ಬಳಿಯಲ್ಲಿ ಬಲ ಭಾಗಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆಯಲ್ಲಿ ಮಹಿಳೆ ಓಡಿಸುತ್ತಿದ್ದಂತ ಬೈಕ್ ಗೆ ಡಿಕ್ಕಿಯಾಗಿತ್ತು.
ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಿದ್ದರು. ಇಂತಹ ಮಹಿಳೆ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ. ಈ ಘಟನೆ ಕುರಿತಂತೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಹೆಡ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆ ಕೇಸ್: ಪತ್ನಿ, ಮಾವ, ಬಾಮೈದನ ವಿರುದ್ಧ FIR ದಾಖಲು
Watch Video : 100ಕ್ಕೂ ಹೆಚ್ಚು ಮನೆಗಳಿಂದ 1,000 ಜೋಡಿ ಶೂ ಕದ್ದ ದಂಪತಿಗಳು, ಮಾರುಕಟ್ಟೆಯಲ್ಲಿ ಮಾರಾಟ