ಬೆಂಗಳೂರು : ಇಂದು ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನಡೆಸಿತು. ವಾದ-ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ಇಂದು ಸಂಜೆ 5 ಗಂಟೆಗೆ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸೋದಾಗಿ ಆದೇಶವನ್ನು ಕಾಯ್ದಿರಿಸಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಮಹಿಳೆ ಕಿಡ್ನ್ಯಾಪ್ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಹೆಚ್.ಡಿ ರೇವಣ್ಣಗೆ ಸದ್ಯಕ್ಕೆ ಜಾಮೀನು ನೀಡದಂತೆ ಎಸ್ಐಟಿ ಪರ ಎಸ್ ಪಿಪಿ ಜಾಯ್ನಾ ಕೊಥಾರಿ ಅವರು ಆಕ್ಷೇಪಣೆ ಸಲ್ಲಿಸಿದರು.
ರೇವಣ್ಣ ಪುತ್ರ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ರೇಣ್ಣಗೆ ಜಾಮೀನು ನೀಡಿದ್ರೆ ಸಾಕ್ಷ್ಯಾಧಾರ ನಾಶಪಡಿಸಬಹುದು. ಆರೋಪಿ ಪ್ರಭಾವಿ ಎಂಬ ಅಂಶವನ್ನು ಪರಿಗಣಿಸಬೇಕು. ಇದು ಕೆವಲ ಬೆದರಿಕೆ ಹಾಕಿರುವ ಪ್ರಕರಣವಲ್ಲ. ಅಪಹರಣವಾದ ಮಹಿಳೆ ಅತ್ಯಾಚಾರದ ಸಂತ್ರಸ್ತೆ, ಮಹಿಳೆಯ ದೂರು ದಾಖಲಾಗಬಾರದೆಂದು ಅಪಹರಿಸಲಾಗಿತ್ತು. ಇತರೆ ಮಹಿಳೆಯರು ದೂರು ನೀಡದೆ ತಡೆಯುವ ಯತ್ನವಿದೆ. ಜಾಮೀನು ನೀಡಿದ್ರೆ ನ್ಯಾಯಾದಾನ ಹಾದಿಗೆ ತೊಡಕಾಗಬಹುದು ಎಂದು ವಾದ ಮಂಡಿಸಿದರು.
ಹೆಚ್. ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದು, ಮೇ. 2 ಕ್ಕೂ ಮುನ್ನ ಅಪಹರಣದ ದೂರನ್ನೇಕೆ ನೀಡಲಿಲ್ಲ. ವಿಳವಂಬಕ್ಕೆ ಕಾರಣವನ್ನೂ ದೂರುದಾರ ತನ್ನ ಹೇಳಿಕೆ ನೀಡಿಲ್ಲ. ಮಹಿಳೆ ಹೆಚ್.ಡಿ. ರೇವಣ್ಣವರಿಗೆ ರಕ್ತ ಸಂಬಂಧಿಯಾಗಬೇಕು. ಆಕೆ ಹೆಚ್. ರೇವಣ್ಣನವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಹೇಳಿದರು.
ಎಸ್ಐಟಿ ಎಸ್ ಪಿಪಿ ಹಾಗೂ ಹೆಚ್.ಡಿ ರೇವಣ್ಣ ಪರ ವಕೀಲ ಸಿ.ವಿ ನಾಗೇಶ್ ವಾದ ಆಲಿಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದಂತ ಸಂತೋಷ್ ಗಜಾನನ ಭಟ್ ಅವರು, ಇಂದೇ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಾಧ್ಯವಾದ್ರೆ ಇಂದು ಸಂಜೆ 5 ಗಂಟೆಯ ವೇಳೆತೆ ತೀರ್ಪು ಪ್ರಕಟಿಸೋದಾಗಿ ತಿಳಿಸಿ, ಹೆಚ್.ಡಿ ರೇವಣ್ಣ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದರು.
Viral video : ಮತದಾನಕ್ಕಾಗಿ ಸರತಿ ಸಾಲಲ್ಲಿ ನಿಂತ ‘ಮತದಾರ’ನಿಗೆ ಆಂಧ್ರ ಸಿಎಂ ಜಗನ್ ಪಕ್ಷದ ‘ಶಾಸಕ’ನಿಂದ ಕಪಾಳಮೋಕ್ಷ
BREAKING: ‘ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ’ ಸೇರಿ ಇಬ್ಬರ ವಿರುದ್ಧ ‘FIR’ ದಾಖಲು