ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ರದ್ದಾದ ಬಳಿಕ ಬಂಧಿಸಲ್ಪಟ್ಟು ಜೈಲುಪಾಲಾಗಿದ್ದಾರೆ. ಜೈಲಿನಲ್ಲಿರುವಂತ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಹೊಸ ಪೋಟೋ ರಿಲೀಸ್ ಆಗಿದೆ. ಆ ಪೋಟೋದಲ್ಲಿ ನಟ ದರ್ಶನ್ ಬೋಳು ತಲೆ, ಸುಕ್ಕು ಗಟ್ಟಿದ ಮುಖ ಕಂಡು ಬಂದರೇ, ಇತ್ತ ಪವಿತ್ರಾ ಗೌಡ ಮಾತ್ರ ನಗುಮುಖದಲ್ಲೇ ಇರುವುದು ಕಾಣಬಹುದು.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ರದ್ದುಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ನಟ ದರ್ಶನ್ ಅಂಡ್ ಗ್ಯಾಂಗ್ ಗೆ ನೀಡಿದ್ದಂತ ಜಾಮೀನು ರದ್ದುಗೊಳಿಸಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ನಟ ದರ್ಶನ್ ಜೈಲಿನ ಒಳಗಡೆ ತೆರಳೋ ಮುನ್ನ ತಪಾಸಣೆ ಮಾಡಿದಂತ ಸಂದರ್ಭದಲ್ಲಿನ ಪೋಟೋ ಗಳು ರಿವೀಲ್ ಆಗಿವೆ. ಅವುಗಳಲ್ಲಿ ನಟ ದರ್ಶನ್ ಬೋಳು ತಲೆ, ಸುಕ್ಕುಗಟ್ಟಿದಂತ ಮುಖ ಹಾಗೂ ಬಿಳಿಯಾದಂತ ನೆರೆತ ಗಡ್ಡವನ್ನು ಕಾಡಬಹುದಾಗಿದೆ.
ಇನ್ನೂ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಮಾತ್ರ ಜೈಲಿನೊಳಗೆ ಹೋಗುತ್ತಿದ್ದರೂ ಏನು ಆಗಿಲ್ಲ. ಆಗುವುದೆಲ್ಲ ಒಳ್ಳೇಯದಕ್ಕೆ ಎಂಬಂತೆ ನಗುಮುಖದಿಂದಲೇ ತೆರಳಿರೋದು ಕಂಡು ಬಂದಿದೆ.
ದೇವಸ್ಥಾನಗಳ ಶ್ರೇಯೋಭಿವೃದ್ದಿಗೆ ಅಗತ್ಯ ಸಹಕಾರ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು